ಕುಶಾಲನಗರ, ನ. 21: ಮುಂದಿನ ವರ್ಷದ ಜಾತ್ರಾ ಉತ್ಸವಗಳ ಸಂದರ್ಭ ರೈತರಿಗೆ ಹೆಚ್ಚಿನ ಆದ್ಯತೆ ನೀಡುವದ ರೊಂದಿಗೆ ಜಾತ್ರೆಯಲ್ಲಿ ಮೂರು ದಿನಗಳ ಕಾಲ ಜಾನುವಾರುಗಳ ಪ್ರದರ್ಶನಕ್ಕೆ ಕಾರ್ಯಕ್ರಮಗಳನ್ನು ರೂಪಿಸ ಲಾಗುವದು ಎಂದು ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತ ಕುಮಾರ್ ತಿಳಿಸಿದ್ದಾರೆ.
ಶ್ರೀ ಗಣಪತಿ ರಥೋತ್ಸವ ಮತ್ತು ಉತ್ಸವಗಳ ಅಂಗವಾಗಿ ಸ್ಥಳೀಯ ಗುಂಡುರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ನಡೆದ 97ನೇ ಗೋಪ್ರದರ್ಶನ ಮತ್ತು ಜಾತ್ರೆಯಲ್ಲಿ ರಾಸುಗಳ ಮಾಲೀಕರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 100ನೇ ಗೋಪ್ರದರ್ಶನ ಸಂದರ್ಭ ಜಾನುವಾರುಗಳ ಜಾತ್ರೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲು ಚಿಂತಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಆಡಳಿತ ಮಂಡ ಳಿಯ ಎಂ.ಕೆ. ದಿನೇಶ್ ಮಾತನಾಡಿ, ಗಣಪತಿ ರಥೋತ್ಸವ ಅಂಗವಾಗಿ ನಡೆಯುವ ಗೋ ಪ್ರದರ್ಶನದಲ್ಲಿ ರೈತರು ತಮ್ಮ ರಾಸುಗಳನ್ನು ಮತ್ತು ಜಾನುವಾರುಗಳನ್ನು ತರುವದು ಇತ್ತೀಚಿನ ದಿನಗಳಲ್ಲಿ ಕ್ಷೀಣ ಗೊಳ್ಳುತ್ತಿದೆ. ಈ ಹಿನ್ನೆಲೆ ರೈತರ ಕುಟುಂಬ ಸದಸ್ಯ ರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಾತ್ರಾ ಮಹೋತ್ಸವ ಸಂದರ್ಭ ರೈತ ಸಂತೆ ಮುಂತಾದ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವದ ರೊಂದಿಗೆ ರೈತರು ಬೆಳೆದ ಬೆಳೆಗಳ ಪ್ರದರ್ಶನ, ಮಾರಾಟಕ್ಕೆ ಅನುವು ಮಾಡಿಕೊಡ ಲಾಗುವದು.
ರಾಸಾಯನಿಕ ಗೊಬ್ಬರಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವದ ರೊಂದಿಗೆ ಸಾವಯವ ಕೃಷಿಗೆ ಒತ್ತು ನೀಡಲು ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮಗಳನ್ನು ಈ ಸಂದರ್ಭ ಏರ್ಪಡಿಸಲು ಚಿಂತಿಸಲಾಗಿದೆ ಎಂದರು.
ರಾಸುಗಳ ಪ್ರದರ್ಶನ ಸಂದರ್ಭ ವಿಜೇತರಾದ ರಾಸುಗಳ ಮಾಲೀಕರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು. 100 ಕ್ಕೂ ಅಧಿಕ ರೈತರು ಕಾರ್ಯಕ್ರಮದಲ್ಲಿ ಇದ್ದರು.
ಈ ಸಂದರ್ಭ ದೇವಾಲಯ ಸಮಿತಿಯ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸ ರಾವ್, ಸಹ ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ನಿರ್ದೇಶಕರಾದ ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ, ವಿಶೇಷ ಆಹ್ವಾನಿತರಾಗಿರುವ ವಿ.ಡಿ. ಪುಂಡರೀಕಾಕ್ಷ, ಹೆಚ್.ಎನ್. ರಾಮಚಂದ್ರ, ಡಿ. ಅಪ್ಪಣ್ಣ ಇದ್ದರು.