ಸುಂಟಿಕೊಪ್ಪ, ನ. 21: ಎಲ್ಲೆಲ್ಲೂ ಕನ್ನಡ ಧ್ವಜಾ, ಶಾಲಾ ವಿದ್ಯಾರ್ಥಿಗಳ ಕನ್ನಡ ಪ್ರೇಮಿ ವೇಷ ಭೂಷಣ, ಪಟ್ಟಣದಲ್ಲಿ ರಾರಾಜಿಸಿದ ಕನ್ನಡಾಂಭೆ ಭುವನೇಶ್ವರಿ ದೇವಿಯ ಅಲಂಕೃತ ಮಂಟಪದ ಸ್ತಬ್ಧ ಚಿತ್ರಗಳು, ಪರಿಸರ ಸ್ನೇಹಿ ಭಿತ್ತಿ ಪತ್ರಗಳು ಕನ್ನಡ ಭಾಷಾಭಿಮಾನಿಗಳ, ಸ್ತ್ರೀ ಶಕ್ತಿ ಸಂಘದವರ ಶಿಸ್ತಿನ ನಡಿಗೆಯೊಂದಿಗೆ ಸುಂಟಿಕೊಪ್ಪ ಪಟ್ಟಣದಲ್ಲಿ ಕನ್ನಡ ಭಾಷೆಯ ಸೊಗಡು ಕನ್ನಡದ ಕಂಪು ಪಸರಿಸಿತು.

ಇಲ್ಲಿನ ತಲೆಹೊರೆ ಕಾರ್ಮಿಕರ ಸಂಘ ಕನ್ನಡ ಅಭಿಮಾನಿಗಳ ಸಂಘ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 6ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಸುಂಟಿಕೊಪ್ಪ ಪಟ್ಟಣದ ಅಸುಪಾಸಿನ ಶಾಲೆÉಗಳಾದ ಸರಕಾರಿ ಪದವಿ ಪೂರ್ವ ಕಾಲೇಜು, ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರಾಥಮಿಕ ಶಾಲೆ, ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಸಂತಮೇರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆಂಗ್ಲ ಪದವಿ ಪೂರ್ವ ಕಾಲೇಜು ಸ್ವಸ್ಥ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳು, ಅಂಗನವಾಡಿ ಕೇಂದ್ರದ ಪುಟ್ಟ ಕಂದಮ್ಮಗಳು ಆಯಾ ಶಾಲೆಯಲ್ಲಿ ಸಿದ್ಧಪಡಿಸಿದ ಕನ್ನಡದ ಮೆರಗನ್ನು ವೈಭವೀಕರಿಸುವ ಸ್ತಬ್ಧಚಿತ್ರಗಳನ್ನು ವಾಹನದ ಮೆರವಣಿಗೆ ಮೂಲಕ ಕೊಂಡೊಯ್ದರು.

ವಿದ್ಯಾರ್ಥಿಗಳ ಕನ್ನಡಮಯಿ ವೇಷ ಭೂಷಣ, ಮಂಡ್ಯ ಕಲಾವಿದರ ಪೂಜಾ ಕುಣಿತ ಸಾಂಪ್ರದಾಯಿಕ ವಾದ್ಯ, ಮೇಳ, ಕಳಸ ಹೊತ್ತ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ವಿದ್ಯಾರ್ಥಿಗಳ ಪರಿಸರ ಸ್ನೇಹಿ ಭಿತ್ತಿ ಪತ್ರಗಳು, ಕನ್ನಡಾಭಿಮಾನಿ ಪುರುಷರು ಮಹಿಳೆಯರು ಕನ್ನಡದ ಶಾಲು ಧರಿಸಿ ಡಾ. ರಾಜಕುಮಾರ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಧ್ವನಿವರ್ಧಕದಲ್ಲಿ ಭಿತ್ತರಿಸಿದ ಮೆರವಣಿಗೆ ಜನರಿಗೆ ಮುದ ನೀಡಿತ್ತು. ಕನ್ನಡ ವೃತ್ತದಲ್ಲಿ ಕನ್ನಡಾಂಭೆ ಸ್ತಬ್ಧಚಿತ್ರಕ್ಕೆ ಪುಷ್ಪಾರ್ಚನೆ ನೇರವೇರಿಸಿದ ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಎ. ಲೋಕೇಶ್‍ಕುಮಾರ್ ಕನ್ನಡಾಭಿಮಾನಿಗಳ ಮನಸುಗಳು ಬೆಸೆಯಲು ತಲೆಹೊರೆ ಕಾರ್ಮಿಕರ ಸಂಘÀ ಆಯೋಜಿಸಿರುವ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮ ಅರ್ಥಪೂರ್ಣವಾದುದು, ಇದರಿಂದ ನಾಡಿನ ಭಾಷೆ ಸಂಸ್ಕøತಿ ಉಳಿದು ಬೆಳೆಯಲಿದ್ದು ದೇಶದ ಸುಭದ್ರತೆಗೆ ನಾಂದಿ ಹಾಡಲಿದೆ ಎಂದೂ ಹೇಳಿದರು. ಬಳಿಕ ವಾಹನ ಚಾಲಕರ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿದ್ದ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಕನ್ನಡವೇ ಸತ್ಯ, ನಿತ್ಯ ಕನ್ನಡ ಕಂಪು ಪಸರಿಸಬೇಕು. 1ನೇ ತರಗತಿಯಿಂದ 4ನೇ ತರಗತಿಯವರಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಪೋಷಕರು ಹಾಗೂ ಶಿಕ್ಷಕರು ಆಸಕ್ತಿ ವಹಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಉದ್ಘಾಟನೆ ನೆರೆವೇರಿಸಿ ಮಾತನಾಡಿದ ತಾ.ಪಂ. ಸದಸ್ಯೆ ವಿಮಾಲಾವತಿ ಕನ್ನಡ ನಾಡು, ನುಡಿ, ಸಂಸ್ಕøತಿ, ಆಚಾರ ವಿಚಾರ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಪಂಚದಿನಗಳ ಪುಣ್ಯಭೂಮಿ ಕರ್ನಾಟಕ ವಾಸ್ತುಶಿಲ್ಪದ ತವರೂರಾಗಿದೆ ಎಂದು ಬಣ್ಣಿಸಿದರು.

ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಕನ್ನಡ ಜನಸಾಮಾನ್ಯರ ಭಾಷೆಯಾಗಿದೆ. ದಕ್ಷಿಣ ಭಾರತದ ಹಲವು ರಾಜ್ಯದಲ್ಲಿ ಕನ್ನಡಿಗರು ತಮ್ಮ ಛಾಪು ಮೂಡಿಸಿದ್ದಾರೆ. ರೈತರು ಶ್ರಮಿಕರು ಕನ್ನಡಭಾಷೆ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆಂದರು.

ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ತಲೆಹೊರೆ ಕಾರ್ಮಿಕರ ಸಂಘದ ಕನ್ನಡ ಪ್ರೇಮಿ ಕಾಯಕದ ಬಗ್ಗೆ ಕೊಂಡಾಡಿದರು. ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಸುಂಟಿಕೊಪ್ಪ ನಾಡುಗೌಡ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್, ರಾಜ್ಯ ಸ್ತ್ರೀಶಕ್ತಿ ಒಕ್ಕೂಟದ ಕಾರ್ಯದರ್ಶಿ ರಹೆನಾ ಫೈರೋಜ್, ಗ್ರಾ.ಪಂ. ಉಪಾದ್ಯಕ್ಷ ಪಿ.ಆರ್. ಸುಕುಮಾರ್, ಗ್ರಾ.ಪಂ. ಸದಸ್ಯರುಗಳಾದ ನಾಗರತ್ನ ಸುರೇಶ್, ಗಂಗಮ್ಮ, ಭೀಮಯ್ಯ, ಶಿವಮ್ಮ ಮಹೇಶ್, ಶೋಭಾರವಿ, ಶಾಹೀದ್, ಎ. ಶ್ರೀಧರ್ ಕುಮಾರ್, ಕೆ.ಇ. ಕರೀಂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಸುನೀಲ್, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ, ಅಚ್ಚುಪ್ಪ (ಹಂಸ), ಆಟೋ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ (ದಿನು), ವರ್ಕ್‍ಶಾಪ್ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ವಿವಿಧ ಶಾಲಾ-ಕಾಲೇಜುಗಳ ಮುಖ್ಯ ಶಿಕ್ಷಕರುಗಳಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಚಂದ್ರ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಾಲಕೃಷ್ಣ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಸಿ. ಗೀತಾ, ಸಂತಮೇರಿ ಅಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸೆಲ್ವರಾಜ್, ಸಂತ ಅಂತೋಣಿ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿ ಬಿ.ಡಿ. ರಾಜುರೈ, ಸುಂಟಿಕೊಪ್ಪ ನಾಡು ಗೌಡ ಸಂಘದ ಖಜಾಂಚಿ ಪಟ್ಟೆಮನೆ ಉದಯ ಕುಮಾರ್ ಮತ್ತಿತರರು ಇದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷೆ ಎಂಎಸ್. ರವಿ ವಹಿಸಿ ಮಾತನಾಡಿ ದರು.

ಸನ್ಮಾನ: ಇದೇ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಲತಾ, ಎ. ಎ. ಮೀನಾಕ್ಷಿ ಹಾಗೂ ಜಾನ್ ಸೆಲ್ವರಾಜ್ ಅವರು ಗಳನ್ನು ಸನ್ಮಾನಿಸಿ ಗೌರವಿಸ ಲಾಯಿತು. ಓಡಿಯಪ್ಪನ ಕಾವ್ಯ ಸುದೀಶ್ ಸ್ವಾಗತ ನೃತ್ಯ ಜನಮನ ರಂಜಿಸಿತು. ಪಂ. ಸಿಬ್ಬಂದಿ ಸಂಧ್ಯಾ ಪ್ರಾರ್ಥಿಸಿ, ಪಿ.ಎಫ್. ಸಬಾಸ್ಟೀನ್ ಸ್ವಾಗತಿಸಿ, ನಿರ್ವಹಿಸಿ, ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ವಂದಿಸಿದರು.