ಮಡಿಕೇರಿ, ನ 21: ಸಮುದಾಯದ ಏಳಿಗೆಗಾಗಿ ಪ್ರತಿಯೊಬ್ಬರೂ ಕೈಜೋಡಿಸಿದಲ್ಲಿ ಮಾತ್ರ ಸಂಘಟನೆಗಳು ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಕೊಡವ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ಎ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿ ದರು. ಮೂರ್ನಾಡು ಗೌಡ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾಜದ ಮಹಾಸಭೆಯಲ್ಲಿ ಮಾತನಾಡಿ, ಎಲ್ಲರ ಪಾಲ್ಗೊಳ್ಳುವಿಕೆಯ ಮೂಲಕ ಮಾತ್ರ ಗುರಿ ಸಾಧಿಸಲು ಸಾಧ್ಯ. ಭಿನ್ನಾಭಿಪ್ರಾಯವನ್ನು ಮರೆತು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸ ಬೇಕಾಗಿದೆ ಎಂದರು.

ಸಮಾಜದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸದಸ್ಯರುಗಳು ಸುದೀರ್ಘ ಚರ್ಚೆ ನಡೆಸಿ ಒಮ್ಮತದ ನಿರ್ಣಯ ಕೈಗೊಂಡರು. ನೂತನ ನಿವೇಶನ ಖರೀದಿ, ಪ್ರಸಕ್ತ ಇರುವ ನಿವೇಶನದ ಬಗ್ಗೆ ಯೋಜನೆಗಳನ್ನು ರೂಪಿಸಲು ಸಭೆ ಒಪ್ಪಿಗೆ ನೀಡಿತು. 2016-17ನೇ ಸಾಲಿನ ವರದಿ ಹಾಗೂ ಲೆಕ್ಕಪತ್ರಗಳ ಮಂಡನೆ ನಡೆಯಿತು.

ದಾನಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಐರೀರ ಗೋಪಾಲ್, ಪೊಲೀಸ್ ಅಧಿಕಾರಿ ಮಾಲೇರ ಉಮೇಶ್, ಕುಶಾಲನಗರದ ನಾಟಿ ವೈದ್ಯೆ ಐನಮಂಡ ಲೀಲಾವತಿ, ದೆಹಲಿ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಪ್ರಮುಖರು ಹಾಗೂ ಸಮಾಜದ ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಪ್ರತಿಭಾವಂತ ವಿದ್ಯಾರ್ಥಿ ಅರಿಮಂಡ ರೋಷನ್ ತಮ್ಮಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸ ಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಎ. ಬಿ. ದೀಪ, ಕೆ. ಜಿ. ರಕ್ಷಿತ ಅಪ್ಪಯ್ಯ, ಪಿ.ಎಸ್. ಶೀತಲ್, ಐ.ಕೆ. ಸಂಗೀತ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸ ಲಾಯಿತು.

ಕಾರ್ಯದರ್ಶಿ ಕಾಮೆಯಂಡ ಗಣೇಶ್ ಮತ್ತು ನಿರ್ದೇಶಕರು ಇದ್ದರು. ಸಮಾಜದ ಖಜಾಂಚಿ ಕುಮಾರ್ ದೇವಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.