ವೀರಾಜಪೇಟೆ, ನ. 22: ವೀರಾಜಪೇಟೆ ಲಯನ್ಸ್ ಕ್ಲಬ್ ಹಾಗೂ ಬೆಂಗಳೂರಿನ ಓಟಿಕೇರ್ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ತಾ:25ರಂದು ಬೆಳಿಗ್ಗೆ 10-30ರಿಂದ ಅಪರಾಹ್ನ 1-30ರವರೆಗೆ ಉಚಿತ ವಾಕ್ ಮತ್ತು ಶ್ರವಣ ಪರೀಕ್ಷೆ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಪಟ್ಟಡ ವಿಕ್ರಂ ಚಂಗಪ್ಪ ತಿಳಿಸಿದ್ದಾರೆ.

ಲಯನ್ಸ್ ಕ್ಲಬ್ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಕ್ರಂ ಚಂಗಪ್ಪ ಅವರು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿರುವ ಶ್ರವಣಕ್ಕೆ ಸಂಬಂಧಿಸಿದ ಎಲ್ಲ ರೋಗಗಳು, ಧ್ವನಿ ತೊಂದರೆ, ಮಾತಿನ ಉಚ್ಚಾರಣೆಯಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ಎಲ್ಲ ರೋಗಗಳ ತಪಾಸಣೆ ಮಾಡ ಲಾಗುವದು. ರೋಗಿಗಳಿಗೆ ಅವಶ್ಯಕತೆ ಇದ್ದಲ್ಲಿ ಅಗತ್ಯ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವದು ಎಂದು ಹೇಳಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಅಶ್ವಥ್ ಗಣಪತಿ ಮಾತನಾಡಿ ತಪಾಸಣೆಯ ನಂತರ ಸ್ಪೀಚ್ ಅಂಡ್ ಹಿಯರಿಂಗ್‍ನ ಸಲಹಾ ಸಮಿತಿಯ ಸಭೆಯು ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಕ್ಲಬ್‍ನ ಖಜಾಂಚಿ ಸುಬ್ಬಯ್ಯ, ನಿರ್ದೇಶಕರುಗಳಾದ ಬಬ್ಬು ಸೋಮಣ್ಣ, ಪ್ರತಾಪ್ ಚಿಣ್ಣಪ್ಪ ಉಪಸ್ಥಿತರಿದ್ದರು.