ಗೋಣಿಕೊಪ್ಪ ವರದಿ, ನ. 22: ನಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 64ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು. ಕೌಶಲ್ಯ ಅಭಿವೃದ್ಧಿಯಲ್ಲಿ ಸಹಕಾರ ಸಂಸ್ಥೆಗಳ ಪ್ರಮುಖ ಸಹಬಾಗಿತ್ವ ದಿನಾಚರಣೆಯ ಸಮಾರೋಪದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಲ್ಲೂರು ಭಾಗದ ಮೂವರನ್ನು ಸನ್ಮಾನಿಸಲಾಯಿತು.

ಗ್ರಾಮದ ಚೆರಿಯಪಂಡ ಪೂವಯ್ಯ, ತೀತರಮಾಡ ಟಿ. ವಿಜಯ ಹಾಗೂ ಕೊಕ್ಕಲೆಮಾಡ ಕೆ. ಗೌರಮ್ಮ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ರಾಜ್ಯ ಸರಕಾರ ಮಹಾ ಮಂಡಳಿ ನಿರ್ದೇಶಕ ಎ.ಕೆ. ಮನು ಮುತ್ತಪ್ಪ, ಸಹಕಾರ ಸಂಘಗಳ ಶ್ರೇಯೋಭಿವೃದ್ಧಿಗೆ ಸದಸ್ಯರು ಮುಂದಾಗಬೇಕಾಗಿದೆ. ರೈತರ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯಾಗ ಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರ ಬ್ಯಾಂಕ್ ನಿಯಮಿತ ನಿರ್ದೇಶಕ ಕೊಡಂದೇರ ಪಿ. ಗಣಪತಿ ಮಾತನಾಡಿ, ಸಹಕಾರ ಸಂಘಗಳಲ್ಲಿ ರೈತರಿಗೆ ಶೇ. ಶೂನ್ಯದಿಂದ 3 ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವದರಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಬಡ್ಡಿದರ ಕಡಿಮೆಯಾಗಿದೆ. ಸಹಕಾರ ಸಂಘಗಳು ಜಾರಿಯಲ್ಲಿ ಇಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು. ಕರ್ನಾಟಕ ಇನ್ಸ್‍ಸಿಟ್ಯೂಟ್ ಕೋ ಅಪರೇಟಿವ್ ಮ್ಯಾನೇಜ್‍ಮೆಂಟ್ ಪ್ರಾಂಶುಪಾಲೆ ಆರ್.ಎಸ್. ರೇಣುಕಾ ಅವರು ದಿನದ ಮಹತ್ವದ ಬಗ್ಗೆ ಮತ್ತು ಸಹಕಾರ ಸಂಘಗಳ ವಿಷಯದ ಬಗ್ಗೆ ಮಾತನಾಡಿದರು.

ಈ ಸಂದರ್ಭ ನಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಚೀರ ಎಂ. ಬೋಪಣ್ಣ, ಜಿಲ್ಲಾ ಯೂನಿಯನ್ ನಿಯಮಿತ ಉಪಾಧ್ಯಕ್ಷ ಎಸ್.ಪಿ. ಕಡಿಮೆಯಾಗಿದೆ. ಸಹಕಾರ ಸಂಘಗಳು ಜಾರಿಯಲ್ಲಿ ಇಲ್ಲದಿದ್ದರೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು. ಕರ್ನಾಟಕ ಇನ್ಸ್‍ಸಿಟ್ಯೂಟ್ ಕೋ ಅಪರೇಟಿವ್ ಮ್ಯಾನೇಜ್‍ಮೆಂಟ್ ಪ್ರಾಂಶುಪಾಲೆ ಆರ್.ಎಸ್. ರೇಣುಕಾ ಅವರು ದಿನದ ಮಹತ್ವದ ಬಗ್ಗೆ ಮತ್ತು ಸಹಕಾರ ಸಂಘಗಳ ವಿಷಯದ ಬಗ್ಗೆ ಮಾತನಾಡಿದರು.