*ವೀರಾಜಪೇಟೆ, ನ. 22: ವೀರಾಜಪೇಟೆ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟುಪರಂಬು ಹಾಗೂ ಹಾಕಿ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 5ನೇ ವರ್ಷದ ನಾಕೌಟ್ ಹಾಕಿ ಪಂದ್ಯಾಟದಲ್ಲಿ ಅಮ್ಮತ್ತಿ ಸ್ಪೋಟ್ಸ್ ಕ್ಲಬ್ ಅಮ್ಮತ್ತಿ, ಎಂಆರ್‍ಎಫ್ ಮೂರ್ನಾಡ್, ಯುನೈಟೆಡ್ ಸ್ಪೋಟ್ಸ್ ಕ್ಲಬ್ ಮಡಿಕೇರಿ, ಅಮ್ಮತ್ತಿ ಈಗಲ್ಸ್, ಬೇತು ಯೂತ್ ಕ್ಲಬ್ ತಂಡಗಳು ಜಯ ಸಾಧಿಸಿದೆ.
ಅಮ್ಮತ್ತಿ ಸ್ಪೋಟ್ಸ್ ಕ್ಲಬ್ ಅಮ್ಮತ್ತಿ ತಂಡವು 5-1 ಗೋಲುಗಳಿಂದ ಬೊಟ್ಟಿಯತ್ ನಾಡು ಕುಂದಾ ತಂಡವನ್ನು ಪರಾಭವಗೊಳಿಸಿತು. ಅಮ್ಮತ್ತಿ ತಂಡದ ಪರ ಮಹೇಂದ್ರಮ್ (10,51 ನಿ), ರಾಜಾ (13,20ನಿ), ಸಜನ್ ಅಚ್ಚಯ್ಯ (15ನಿ), ಪರಾಜಿತ ತಂಡದ ಪರ ಬೋಪಣ್ಣ (19ನಿ)ದಲ್ಲಿ ಗೋಲು ಬಾರಿಸಿದರು.
ಎಂಆರ್‍ಎಫ್ ಮೂರ್ನಾಡು ತಂಡವು 5-4 ಗೋಲುಗಳಿಂದ ಪೊದ್ದಮಾನಿಯ ಬ್ಲೂಸ್ಟಾರ್ ತಂಡವನ್ನು ಸಡನ್‍ಡೆತ್‍ನಲ್ಲಿ ಸೋಲಿಸಿತು. ನಿಗದಿತ ಅವಧಿಯಲ್ಲಿ ಇತ್ತಂಡಗಳು 1-1 ಸಮಬಲ ಸಾಧಿಸಿತು. ಆಯೋಜಕರು ಪೆನಾಲ್ಟಿ ಶೂಟೌಟ್ ಘೋಷಿಸಿದರು. ಪೆನಾಲ್ಟಿ ಶೂಟೌಟ್‍ನಲ್ಲಿಯು ಸಮಬಲ ಸಾಧಿಸಿತು. ಸಡನ್‍ಡೆತ್‍ನಲ್ಲಿ ಎಂಆರ್‍ಎಫ್ ಮೂರ್ನಾಡು ತಂಡ ಜಯ ಸಾಧಿಸಿತು. ಮೂರ್ನಾಡು ಎಂಆರ್‍ಎಫ್ ಪರ ಸಂತೋಷ್ (8ನಿ), ಕುಮಾರ್, ಮಂಡಲ್, ಸಂತೋಷ್2, ಪೊದ್ದಮಾನಿ ಬ್ಲೂಸ್ಟಾರ್ ಪರ ಪಂಡರಿರಾಜ್ (46ನಿ), ಅರಣ್, ಆಂಜನೇಯ, ಪೊನ್ನಣ್ಣ ಗೋಲು ದಾಖಲಿಸಿದರು.
ಯುನೈಟೆಡ್ ಸ್ಪೋಟ್ಸ್ ಕ್ಲಬ್ ಮಡಿಕೇರಿ ತಂಡವು 6-4 ಗೋಲುಗಳಿಂದ ವೀರಾಜಪೇಟೆ ಟವರ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಮಣಿಸಿದರು. ನಿಗದಿತ ಅವದಿಯಲ್ಲಿ ಎರಡು ತಂಡಗಳು 3-3 ಗೊಲುಗಳ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಯುನೈಟೆಡ್ ಸ್ಪೋಟ್ಸ್ ಕ್ಲಬ್ ಮಡಿಕೇರಿ ಗೆಲುವು ಸಾಧಿಸಿತು. ಯುನೈಟೆಡ್ ಸ್ಪೋಟ್ಸ್ ಕ್ಲಬ್ ಪರ ಲಿತೀಶ್ ಬಿದ್ದಪ್ಪ (25,35ನಿ), ಕೀರ್ತಿ (45 ಹಾಗೂ ಶೂಟೌಟ್), ನಾಗೇಶ್, ಸಣ್ಣಹನುಮ, ಟವರ್ಸ್ ಪರ ಸಮಾಗ್ (15ನಿ), ಬೋಸ್ (41ನಿ), ನಾಣಯ್ಯ (38ನಿ), ವಿನಯ್ ಗೋಲು ದಾಖಲಿಸಿದರು.
ಅಮ್ಮತ್ತಿ ಈಗಲ್ಸ್ ತಂಡವು 3-2 ಗೋಲುಗಳಿಂದ ಬಲಮುರಿ ಮಹಾದೇವ ಯೂತ್ ಕ್ಲಬ್‍ನ್ನು ಸಡನ್ ಡೆತ್‍ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ 1-1 ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಸಮಬಲ ಸಾಧಿಸಿತು. ಸಡನ್‍ಡೆತ್‍ನಲ್ಲಿ ಅಮ್ಮತ್ತಿ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಅಮ್ಮತ್ತಿ ಈಗಲ್ಸ್ ತಂಡದ ಪರ ಬೊಪಣ್ಣ(52ನಿ), ಸಡನ್ ಡೆತ್‍ನಲ್ಲಿ ಪ್ರಜ್ವಲ್, ಮಹೇಶ್, ಮಹಾದೇವ ತಂಡದ ಪರ ಶಶಾಂಕ್ (51ನಿ), ಸಡನ್ ಡೆತ್‍ನಲ್ಲಿ ಪೂವಣ್ಣ ಗೋಲು ಬಾರಿಸಿದರು.
ಸೋಮವಾರಪೇಟೆಯ ಡಾಲ್ಫಿನ್ಸ್ ತಂಡ ಬಾರದ ಕಾರಣ ಆಯೋಜಕರು ಬೇತು ಯೂತ್ ಕ್ಲಬ್ ತಂಡಕ್ಕೆ ವಾಕ್ ಒವರ್ ನೀಡಿದರು.