ಸಿದ್ದಾಪುರ, ನ. 24: ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾಮ ಪಂಚಾಯಿತಿ ಹಾಗೂ ಅಧಿಕ ವರಮಾನವಿರುವ ಪಂಚಾಯಿತಿ ಎಂಬ ಹೆಗ್ಗಳಿಕೆ ಪಡೆದಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಯು ತಮ್ಮ ವರಮಾನಕ್ಕೆ ತಾನೇ ಕೊಡಲಿ ಪೆಟ್ಟು ನೀಡಿದೆ. ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.
2017 ಹಾಗೂ 2018ನೇ ಸಾಲಿನ ಕುರಿ ಮಾಂಸ, ಕೋಳಿ ಮಾಂಸ ಹಾಗೂ ಹಂದಿ ಮಾಂಸ, ಮಾರಾಟ ಪ್ರಕ್ರಿಯೆಯನ್ನು ಈ ಬಾರಿ ಬಹಿರಂಗ ಹರಾಜು ಮಾಡುವ ಬಗ್ಗೆ ಪಂಚಾಯಿತಿಯು ನಿರ್ಣಯ ಕೈಗೊಂಡಿತ್ತು. ಇದಲ್ಲದೇ ಮಾಂಸ ಮಾರಾಟದ ಲೈಸನ್ಸ್ ಅನ್ನು ರದ್ದುಪಡಿಸುವ ಬಗ್ಗೆ ಚರ್ಚೆಗಳು ನಡೆದವು. ಮಾಂಸ ಮಾರಾಟಗಾರರಿಗೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ರೂ. 12 ಲಕ್ಷ ವೆಚ್ಚದಲ್ಲಿ ನೂತನ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಸಾಲಿನಲ್ಲಿ ಲೈಸನ್ಸ್ ಪಡೆದುಕೊಂಡಿದ್ದ ಮಾಂಸ ಮಾರಾಟಗಾರರು ಈ ಬಾರಿಯ ಬಹಿರಂಗ ಹರಾಜಿನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಹಿನ್ನೆಲೆ ಮಳಿಗೆಗಳನ್ನು ಯಾವದೇ ವ್ಯವಹಾರಕ್ಕೆ ನೀಡದೆ ನೆನೆಗುದಿಗೆ ಬಿದ್ದಂತಾಗಿದೆ. ಇದಲ್ಲದೆ ಪಂಚಾಯಿತಿಯ ಆಡಳಿತ ಮಂಡಳಿಯು ಮಾಂಸ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದನ್ನೇ ನೆಪವಾಗಿಟ್ಟುಕೊಂಡು ಮಾಂಸ ವ್ಯಾಪಾರಸ್ಥರಿಗೆ ಯಾವದೇ ದರವನ್ನು ನಿಗದಿಪಡಿಸದೆ ಹಾಗೂ ಪರವಾನಿಗೆ ಯನ್ನು ನೀಡದೆ ಕೈಕಟ್ಟಿ ಕುಳಿತು ಕೊಂಡಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿಗೆ ಬೇಕಾದ ಆರ್ಥಿಕ ಹಣವನ್ನು ಕ್ರೋಢೀಕರಿಸಿಕೊಳ್ಳ ಬೇಕೆಂದು ಸರ್ಕಾರವು ಆದೇಶವನ್ನು ನೀಡಿದ್ದರೂ ಕೂಡ ಇದನ್ನು ಆಡಳಿತ ಮಂಡಳಿಯು ಗಣನೆಗೆ ತೆಗೆದು ಕೊಂಡಿಲ್ಲ. ಈ ಬಗ್ಗೆ ಆಡಳಿತ ಮಂಡಳಿ ಆಗಲಿ ವಿರೋಧ ಪಕ್ಷದ ಸದಸ್ಯರು ಗಳಾಗಲಿ ಚಕಾರವೆತ್ತದೆ ಪ್ರತಿ ಮಾಸಿಕ ಸಭೆಯಲ್ಲಿ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ಆರೋಪ ಪ್ರತ್ಯಾರೋಪ ಮಾಡುತ್ತ ಸಮಯವನ್ನು ವ್ಯರ್ಥ ಮಾಡುತ್ತಾರೆ. ಹೊರತು ಅಭಿವೃದ್ಧಿಯ ಕಾರ್ಯಗಳ ಬಗ್ಗೆ ಚಿಂತಿಸುತ್ತಿಲ್ಲ. ಒಂದೆಡೆ ಗ್ರಾಮ ಪಂಚಾಯಿತಿಯು ರೂ. 12 ಲಕ್ಷದಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿ ಪಂಚಾಯಿತಿಯ ಹಣವನ್ನು ನಿಷ್ಪ್ರಯೋಜಕ ಮಾಡಿದ್ದಲ್ಲದೇ ಮಾಂಸ ವ್ಯಾಪಾರಿಗಳಿಗೆ ಲೈಸನ್ಸ್ ಅನ್ನು ನೀಡದೇ ಅಥವಾ ಹರಾಜು ಪ್ರಕ್ರಿಯೆಯನ್ನು