ಮಡಿಕೇರಿ, ನ. 23: ಮನೆಮನೆಗೆ ಕಾಂಗ್ರೆಸ್ ನಡಿಗೆ ಅಭಿಯಾನ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು. ಅಬ್ದುಲ್ ರಜಾಕ್ ನೇತೃತ್ವದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಿತು.ಚಾಮುಂಡೇಶ್ವರಿ ನಗರ, ಜ್ಯೋತಿ ನಗರ, ಪೆನ್‍ಷನ್‍ಲೈನ್, ಗೌಳಿಬೀದಿ, ಪೊಲೀಸ್ ಮೈದಾನ, ಲಷ್ಕರ್ ಮಸೀದಿ, ಹೊಟೇಲ್ ರಾಜದರ್ಶನ್ ಹಿಂಭಾಗ, ರಾಜಾಸೀಟ್ ರಸ್ತೆ ಸೇರಿದಂತೆ ವಿವಿಧೆಡೆ ತೆರಳಿದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಮಾಜಿ ಸದಸ್ಯರುಗಳಾದ ಟಿ.ಯಂ. ಅಯ್ಯಪ್ಪ, ಸುನಿಲ್ ನಂಜಪ್ಪ, ಸದಸ್ಯರುಗಳಾದ ನಂದಕುಮಾರ್, ತಜಸುಂ, ಜುಲೈಕಾಬಿ, ಕೆ.ಎಂ. ವೆಂಕಟೇಶ್, ಪ್ರಕಾಶ್ ಆಚಾರ್ಯ, ಪುಲಿಯಂಡ ಜಗ್ಗ, ಟಿ.ಪಿ. ನಾಣಯ್ಯ, ಪ್ರಭುರೈ, ಇಬ್ರಾಹಿಂ, ಇಸ್ಮಾಯಿಲ್ ಮಹಮ್ಮದ್, ಚಂದ್ರಶೇಖರ್, ಯೂಸುಫ್, ಸದಾ ಮುದ್ದಪ್ಪ, ಇಸ್ಮಾಯಿಲ್, ಕೌಸರ್, ಎ.ಜೆ. ರಮೇಶ್, ಶೇಕ್ ಅಹಮ್ಮದ್ ಜಫರ್‍ಉಲ್ಲಾ, ಮುನೀರ್, ಸುಧಾಯ್ ನಾಣಯ್ಯ, ಎಂ.ಎಂ. ಹನೀಫ್ ಇಬ್ರಾನ್, ಫಿಲೋಮಿನ, ರಾಧ ಶಶಿ ಮೊದಲಾದವರು ಭಾಗವಹಿಸಿದ್ದರು.
ಮನೆಮನೆಗೆ ನಡಿಗೆ ಕಾರ್ಯಕ್ರಮ ಮಡಿಕೇರಿ ನಗರದಲ್ಲಿ ಕೊನೆಯ ಹಂತದಲ್ಲಿ ನಡೆಯುತ್ತಿದ್ದು, ನಗರದ 23 ವಾರ್ಡ್‍ಗಳಲ್ಲಿ 19 ವಾರ್ಡ್ ಪೂರ್ಣಗೊಂಡಿದೆ.
ಮಿಕ್ಕುಳಿದ 4 ವಾರ್ಡ್‍ಗಳಲ್ಲಿ ಕೆಲವು ದಿನಗಳಲ್ಲಿ ಅಭಿಯಾನ ಮುಕ್ತಾಯಗೊಳ್ಳಲಿದೆ ಎಂದು ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ತಿಳಿಸಿದರು. ಸುಮಾರು 6,500 ಮನೆಗಳಿಗೆ ಭೇಟಿ ನೀಡಿರುವದಾಗಿ ಹೇಳಿದರು.