ಕುಶಾಲನಗರ, ನ. 23: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಯಲ್ಲಿ ಫುಟ್ಪಾತ್ ಬದಿಯ ಸಣ್ಣ ವ್ಯಾಪಾರಿಗಳ ಸ್ವಸಹಾಯ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಂಟಿಯಾಗಿ ಪಾಲ್ಗೊಂಡು ಧರಣಿ ನಡೆಸಿದರು.

ಪಟ್ಟಣದ ಕಾರು ನಿಲ್ದಾಣದಲ್ಲಿನ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆದ ಧರಣಿಯಲ್ಲಿ ತಾಲೂಕು ರಚನೆಗೆ ಆಗ್ರಹಿಸಲಾಯಿತು. ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಘೋಷಣೆಗಳನ್ನು ಕೂಗಲಾಯಿತು.

ಈ ಸಂದರ್ಭ ಪ್ರಮುಖರಾದ ಕೆ.ಬಿ.ರಾಜು, ರವಿ, ಕೆ.ಆರ್. ಜಗದೀಶ್, ಲಕ್ಷ್ಮಮ್ಮ, ರಾಧಾ, ಸಾವಿತ್ರಮ್ಮ ಮತ್ತಿತರರು ಇದ್ದರು.