ವೀರಾಜಪೇಟೆ: ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕಾಕೋಟಪರಂಬು ಹಾಗೂ ಹಾಕಿ ಕೊಡಗು ಸಂಸ್ಥೆಯ ಸಹಯೊಗದಲ್ಲಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ನಾಕೌಟ್ ಹಾಕಿ ಪಂದ್ಯಾವಳಿಯಲ್ಲಿ ಮೂರ್ನಾಡು ಎಂಆರ್‍ಎಫ್, ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್, ಕಾಕೋಟುಪರಂಬು ಎಸ್‍ಆರ್‍ಸಿ, ಅಮ್ಮತ್ತಿ ಈಗಲ್ಸ್ ತಂಡಗಳು ಸೆಮಿ ಫೈನಲ್ಸ್‍ನಲ್ಲಿ ಸೆಣಸಲಿವೆ.

ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಮೂರ್ನಾಡು ಎಂಆರ್‍ಎಫ್ ತಂಡವು 3-1 ಗೋಲುಗಳಿಂದ ಬೇತು ಯೂತ್ ಕ್ಲಬ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು 1-1 ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಮೂರ್ನಾಡು ತಂಡ ಜಯ ಗಳಿಸಿತು. ಮೂರ್ನಾಡು ಪರ ಪುನಿತ್(20ನಿ), ಪೆನಾಲ್ಟಿ ಶೂಟೌಟ್‍ನಲ್ಲಿ ಸಂತೋಷ್, ಕುಮಾರ್, ಬೇತು ಯೂತ್ ಕ್ಲಬ್ ಪರ (38) ನೇ ನಿಮಿಷದದಲ್ಲಿ ಅತಿಥಿ ಆಟಗಾರ ವಿಜಯ್ ಪಾಟೀಲ್ ಬಾರಿಸಿದ ಏಕೈಕ ಗೋಲಿನಿಂದ ಪಂದ್ಯಾಟದಿಂದ ಹೊರಗುಳಿಯ ಬೇಕಾಯಿತು.

ವೀರಾಜಪೇಟೆ ಕೊಡವ ಸಮಾಜ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ತಂಡವು 6-4 ಗೋಲುಗಳಿಂದ ಈ ವರ್ಷದ ಚಾಂಪಿಯನ್ ತಂಡವಾದ ಹಾತೂರು ಸ್ಫೋಟ್ರ್ಸ್ ಕ್ಲಬ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಮಣಿಸಿತು. ನಿಗದಿತ ಅವಧಿಯಲ್ಲಿ 2-2 ಗೋಲುಗಳ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‍ನಲ್ಲಿ ಹಾತೂರು ತಂಡದ ಗೋಲ್ ಕೀಪರ್ ಮಾಡಿದ ತಪ್ಪಿನಿಂದಾಗಿ ತೀರ್ಪುಗಾರರು ಕೊಡವ ಸಮಾಜ ತಂಡಕ್ಕೆ ಪೆನಾಲ್ಟಿ ಸ್ಟ್ರೋಕ್ ನೀಡಿದರು. ಕೊಡವ ಸಮಾಜದ ಪರ ಗಣಪತಿ (18ನಿ) ಭರತ್ (19 ಸ್ಟ್ರೋಕ್ ಹಾಗೂ ಶೂಟೌಟ್), ಪುನಿತ್, ಮಣಿಕಂಠ, ಹಾತೂರು ತಂಡದ ಪರ ಗಣಪತಿ (40), ಅಪ್ಪಚ್ಚು (49ನಿ), ಶೂಟೌಟ್‍ನಲ್ಲಿ ಸೋಮಣ್ಣ, ಧನು ಗೋಲು ದಾಖಲಿಸಿದರು.

ಕಾಕೋಟುಪರಂಬು ಎಸ್‍ಆರ್‍ಸಿ ತಂಡವು 3-2 ಗೋಲುಗಳಿಂದ ಮಡಿಕೇರಿ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ತಂಡವನ್ನು ಸೋಲಿಸಿತು. ಎಸ್‍ಆರ್‍ಸಿ ಪರ ಧನುಷ್ (14ನಿ), ಅಯ್ಯ¥ À್ಪ (16), ಬೆಳ್ಳಿಯಪ್ಪ (48ನಿ), ಮಡಿಕೇರಿ ಯುನೈಟೆಡ್ ಪರ ಕೀರ್ತನ್ (7,23ನಿ) ಗೋಲು ದಾಖಲಿಸಿದರು.

ಅಮ್ಮತ್ತಿ ಈಗಲ್ಸ್ ತಂಡವು 7-5 ಗೋಲುಗಳಿಂದ ಕುತ್ತುನಾಡು ಡ್ರಿಬಲರ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಸೋಲಿಸಿ ಸೆಮಿಫೈನಲ್ಸ್ ಪ್ರವೇಶ ಪಡೆದುಕೊಂಡಿತು. ಅಮ್ಮತ್ತಿ ಈಗಲ್ಸ್ ಪರ ಪೊನ್ನಪ್ಪ (8,47,ನಿ ಶೂಟೌಟ್) ಬೋಪಣ್ಣ, ಪ್ರಜ್ವಲ್, ರೋಹನ್, ಉಮೇಶ್, ಕುತ್ತುನಾಡು ಡ್ರಿಬಲರ್ಸ್ ಪರ ಮೋಕ್ಷೀತ್ (24ನಿ, ಶೂಟೌಟ್), ಲಿಖಿತ್(55ನಿ), ಹರ್ಷ, ಆರನ್‍ರಾಜ್ ಗೋಲು ದಾಖಲಿಸಿದರು.