ಗೋಣಿಕೊಪ್ಪ ವರದಿ, ನ. 24: ಭತ್ತದ ಬೆಳೆಯ ಕ್ಷೇತ್ರೋತ್ಸವ ಹಾಗೂ ಸಮಗ್ರ ಕೃಷಿ ಪದ್ಧತಿಗಳ ವಿಚಾರ ಸಂಕಿರಣ ಕಾರ್ಯಕ್ರಮ ತಾ. 29 ರಂದು ಪೊನ್ನಂಪೇಟೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿವಿಧ ಸುಧಾರಿತ ಭತ್ತದ ತಳಿಗಳು, ಬೆಂಕಿ ರೋಗ ನಿರೋಧಕ ಹೊಸ ತಳಿಗಳ ಪರಿಚಯ ಮತ್ತು ಪ್ರಾತ್ಯಕ್ಷಿತೆ, ಎರೆಗೊಬ್ಬರ ತಯಾರಿಕೆ ಮತ್ತು ಬಯೋಡೈಜಿಸ್ಟರ್, ಮೀನು ಮತ್ತು ಹಂದಿ ಸಾಕಣಿಕೆ, ವೈಜ್ಞಾನಿಕ ಜೇನು ಕೃಷಿ, ಕೃಷಿ ಅರಣ್ಯ ಪದ್ದತಿ, ಪುಷ್ಪ ಬೇಸಾಯ ಮತ್ತು ಸಂರಕ್ಷಿತ ತರಕಾರಿ ಕೃಷಿ, ವಿವಿಧ ಅರಣ್ಯ ಸಸಿಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ, ಜೈವಿಕ ಇಂಧನ ಉತ್ಪಾದನೆಯ ಪ್ರಾತ್ಯಕ್ಷಿಕೆ ಮತ್ತು ಜೈವಿಕ ಇಂಧನ ಬಳಸಿ ಟ್ರ್ಯಾಕ್ಟರ್ ಚಾಲನೆಯ ಪ್ರಾತ್ಯಕ್ಷಿಕೆ, ರೈತ-ವಿಜ್ಞಾನಿಗಳ ವಿಚಾರ ವಿನಿಮಯ, ವಿವಿಧ ಇಲಾಖೆಗಳ ಹಾಗೂ ಸಂಸ್ಥೆಗಳ ಬೀಜ, ಗೊಬ್ಬರ, ಸಸ್ಯ ಸಂರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ನಾರಾಯಣಸ್ವಾಮಿ, ಭಾರತೀಯ ಕೃಷಿ ಅನುಬಂಧನ ಪರಿಷತ್ ಸಹಾಯಕ ಮಹಾ ನಿರ್ದೇಶಕ ಎಸ್. ಭಾಸ್ಕರ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಟಿ. ಹೆಚ್. ಗೌಡ, ಜಿಲ್ಲಾ ಕೃಷಿ ಇಲಾಕೆ ಜಂಟಿ ಕೃಷಿ ನಿರ್ದೇಶಕ ಕೆ. ರಾಮಪ್ಪ, ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕೆ.ಪಿ. ದೇವಕಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ, ಜಿಲ್ಲಾ ಕೃಷಿ ಸಮಾಜ ಅಧ್ಯಕ್ಷ ಮಾಚೆಟ್ಟಿರ ಚೋಟು ಕಾವೇರಪ್ಪ ಭಾಗವಹಿಸಲಿದ್ದಾರೆ.