ಮಡಿಕೇರಿ, ನ.24 : ಮರಗೋಡು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಹಾಗೂ ಮರಗೋಡು ಮತ್ತು ಹೊಸ್ಕೇರಿ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ತಾ.25 ಮತ್ತು 26 ರಂದು ಇಂಟರ್ ವಿಲೇಜ್ ಚಾಂಪಿಯನ್ ಶಿಪ್-2017 ಆಟೋಟ ಸ್ಪರ್ಧೆ ನಡೆಯಲಿದೆ.
ಮರಗೋಡು ಭಾರತಿ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ಬೆಳಗ್ಗೆ 8.45 ಕ್ಕೆ ಮರಗೋಡು ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ನ ಅಧ್ಯಕ್ಷ ಕೋಚನ ಲವಿನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕಾರ್ಪೊರೇಷನ್ ಬ್ಯಾಂಕ್ನ ನಿವೃತ್ತ ಎ.ಜಿ.ಎಂ. ತೋಟಂಬೈಲು ಮನೋಹರ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ಎ.ಜೀವಿಜಯ, ಹೊಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತ, ಮಡಿಕೇರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಕಾಂಗೀರ ಸತೀಶ್, ಬೆಂಗಳೂರಿನ ಉದ್ಯಮಿಗಳಾದ ತೇನನ ರಾಜೇಶ್, ಬೆಂಗಳೂರಿನ ಜಂಟಿ ಆಯುಕ್ತ ಪಾಣತ್ತಲೆ ಆರ್. ಪಳಂಗಪ್ಪ, ಸಿದ್ದಾಪುರದ ಸಂಗೀತ ಕಾಫಿ ವಕ್ರ್ಸ್ನ ಮಾಲೀಕ ಹಸೈನಾರ್, ನಿವೃತ್ತ ಕೆ.ಎಸ್.ಎಫ್.ಸಿ. ಅಧಿಕಾರಿಗಳಾದ ಮಳ್ಳಂದಿರ ಕೃಷ್ಣರಾಜು, ಹೊಸ್ಕೇರಿ ಸಾವಯವ ಕೃಷಿ ಭಾಗ್ಯ ಯೋಜನೆಯ ಅಧ್ಯಕ್ಷ ಮುಕ್ಕಾಟಿರ ಸದಾ ಡೆನ್ನಿಸ್, ಕಾಫಿ ಬೆಳೆಗಾರರಾದ ಎಂ.ವಿ. ವಾಸುದೇವನ್, ನಂದೇಟಿರ ಸುಬ್ಬಯ್ಯ, ಸಂಕೇತ್ ಪೂವಯ್ಯ, ಚೆರಿಯಮನೆ ರೋಹಿಣಿ ವಿಠಲ, ಕಾಫಿ ಬೆಳೆಗಾರರು ಹಾಗೂ ಉದ್ಯಮಿಗಳಾದ ಪೈಕೆರ ಮನೋಹರ್ ಮಾದಪ್ಪ ಭಾಗವಹಿಸಲಿದ್ದಾರೆ.
ನಾಳೆ ಸಮಾರೋಪ
ನ.26 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೊಂಬಾರನ ಜಿ. ಬೋಪಯ್ಯ, ಮರಗೋಡು ಗ್ರಾಮ ಪಂ. ಅಧ್ಯಕ್ಷ ಬಿದ್ರುಪಣೆ ಮೋಹನ್, ಐ.ಎನ್.ಟಿ.ಯು.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ನಮಾಜ್ ಕೋ ಟ್ರೇಡರ್ಸ್ನ ಮಾಲೀಕ ಶಫೀಕ್, ಉದ್ಯಮಿ ಪೂಳಕಂಡ ಆರ್. ರಾಜೇಶ್ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.