ನಾಪೆÇೀಕ್ಲು, ನ. 23: ಸರಕಾರ, ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳುತ್ತಿ ದ್ದಾರೆ. ದೂರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಾಗಿರಲಿ, ಆದರೆ ಪಟ್ಟಣದ ಬಳಿಯಲ್ಲಿರುವ ಗ್ರಾಮೀಣ ರಸ್ತೆಗಳ ಕಾಮಗಾರಿ ಕೂಡ ನಡೆಯದಿರುವದು ಮಾತ್ರ ವಿಪರ್ಯಾಸ ಎಂಬಂತಾಗಿದೆ. ಇದಕ್ಕೆ ಉದಾಹರಣೆ ನಾಪೆÇೀಕ್ಲು ಪಟ್ಟಣದ ರಾಮ ಮಂದಿರದಿಂದ ಮತ್ತು ಹಳೇ ತಾಲೂಕುವಿನಿಂದ ಮೂಟೇರಿ ಉಮಾ ಮಹೇಶ್ವರಿ ದೇವಳಕ್ಕಾಗಿ ಈಸ್ಟ್ ಕೊಳಕೇರಿ ಗ್ರಾಮಕ್ಕೆ ಸಾಗುವ ರಸ್ತೆಗಳು.ದಿ. ಬಿ.ಟಿ. ಪ್ರದೀಪ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭ ಸ್ವಲ್ಪ ಪ್ರಮಾಣದ ರಸ್ತೆ ದುರಸ್ತಿ ಕಾಮಗಾರಿ ನಡೆದಿರುವದು ಹೊರತು ಪಡಿಸಿದರೆ, ಈ ರಸ್ತೆಯ ದುರಸ್ತಿಗೆ ಯಾರೂ ಮನಸ್ಸು ಮಾಡಿಲ್ಲ. ಈ ರಸ್ತೆಯ ಡಾಂಬರು, ಸಂಪೂರ್ಣವಾಗಿ ಮೇಲೆದ್ದ ಪರಿಣಾಮ ವಾಹನ ಸಂಚಾರದೊಂದಿಗೆ ಮನುಷ್ಯರು, ಜಾನುವಾರುಗಳು ಈ ರಸ್ತೆಯಲ್ಲಿ ನಡೆದಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವ್ಯಾಪ್ತಿಯಲ್ಲಿ ವಾಸಿಸುವ ಬಿದ್ದಾಟಂಡ, ನೆಡುಮಂಡ, ಪುಲ್ಲೇರ, ಅಚ್ಚಾಂಡಿರ, ತಟ್ಟಂಡ ಕುಟುಂಬಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಪ್ರಯಾಸದಿಂದ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರಸಿದ್ಧ ಬಿದ್ದಾಟಂಡ ವಾಡೆಯ ನೂರಂಬಡ ಊರ್ ಮಂದ್‍ಗೆ ಇದೇ ರಸ್ತೆಯಲ್ಲಿ ಸಾಗಬೇಕಾಗಿದೆ. ಹುತ್ತರಿ ಹಬ್ಬದ ಕೋಲಾಟದಲ್ಲಿ ಇಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಗ್ರಾಮಸ್ಥರ ಪರ ಬಿದ್ದಾಟಂಡ ಸಂಪತ್, ನೆಡುಮಂಡ ಕೃತಿ, ಅಚ್ಚಾಂಡಿರ ಸಾಬು ದೇವಯ್ಯ, ಬಿದ್ದಾಟಂಡ ಜಿನ್ನು ನಾಣಯ್ಯ ಮತ್ತಿತರರು ಎಚ್ಚರಿಸಿದ್ದಾರೆ.

- ಪಿ.ವಿ. ಪ್ರಭಾಕರ್