ವೀರಾಜಪೇಟೆ, ನ. 25: ತಮ್ಮ ಹೊಣೆಯರಿತು ಕೆಲಸ ನಿರ್ವಹಿಸುವದರ ಮೂಲಕ ಪ್ರಸಕ್ತ ಸವಾಲುಗಳನ್ನು ಎದುರಿಸಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್‍ನ ಕಣ್ಣನೂರು ಜಿಲ್ಲಾ ಸಂಚಾಲಕ ಯು.ಪಿ. ಸಿದ್ದೀಖ್ ಮಾಸ್ಟರ್ ಅಭಿಪ್ರಾಯಪಟ್ಟಿದ್ದಾರೆ.ಸಿದ್ದಾಪುರ ಮಾರ್ಕೆಟ್ ರಸ್ತೆಯ ಹಿರಾ ಸೆಂಟರಿನಲ್ಲಿ “ಪ್ರಸಕ್ತ ವಿದ್ಯಮಾನ ಗಳು ಮತ್ತು ಮುಸ್ಲಿಂ ಮರು” ಎಂಬ ವಿಷಯದಲ್ಲಿ ಏರ್ಪಡಿಸಿದ್ದ ಗಣ್ಯರ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆ ಮುಸಲ್ಮಾನರು ಪ್ರವಾದಿ ಜೀವನವನ್ನು ಮಾದರಿಯಾಗಿಟ್ಟು ಸವಾಲುಗಳನ್ನು ಎದುರಿಸಬೇಕು.
ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಪಿ.ಪಿ. ಉಮರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಂಚಾಲಕ ಸಿ.ಹೆಚ್. ಅಪ್ಸರ್, ಯುನೈಟೆಡ್ ಮುಸ್ಲಿಂ ವೇದಿಕೆಯ ಮುಹಮ್ಮದ್ ನಜೀಬ್ ವೇದಿಕೆಯಲ್ಲಿದ್ದರು. ಟಿ.ಎ. ಬಷೀರ್ ಸ್ವಾಗತಿಸಿದರು, ಎ.ಕೆ. ಅಬ್ದುಲ್ಲಾ ವಂದಿಸಿದರು. ರಿಝ್‍ವಾನ್ ಖಿರಾಅರತ್ ಪಠಿಸಿದರು.