ನಾಪೆÉÇೀಕ್ಲು, ನ. 25: ನ. 17 ಕೊಟ್ಟಮುಡಿ ಸಮೀಪದ ಕೇಮಾಟ್ ಎಂಬಲ್ಲಿ ಮಡಿಕೇರಿ ಕಾಲೇಜಿನಲ್ಲಿ ಪರೀಕ್ಷೆ ಬರೆದು ನಾಪೆÉÇೀಕ್ಲುವಿಗೆ ಬಸ್ಸಿನಲ್ಲಿ ಹಿಂತಿರುಗುತ್ತಿದ್ದ ವಿದ್ಯಾರ್ಥಿ ದೀಲನ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ನಾಪೆÉÇೀಕ್ಲು ಕೊಡವ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಗುವದು ಎಂದು ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಮತ್ತು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಸ್ಥಳೀಯ ಕೊಡವ ಸಮಾಜದ ಸಭಾಂಗಣದಲ್ಲಿ ಕರೆಯಲಾಗಿದ್ದ ಎಂದರು. ಸಮಾಜದ ಶಾಂತಿ ಕದಡುವ ಕಿಡಿಗೇಡಿಗಳನ್ನು aಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಮಾಳೇಯಂಡ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಮಂಡೀರ ರಾಜಪ್ಪ, ಸಹ ಕಾರ್ಯದರ್ಶಿ ಕನ್ನಂಭಿರ ಸುಧಿ ತಿಮ್ಮಯ್ಯ, ಖಜಾಂಚಿ ಅಪ್ಪಾರಂಡ ಸಧೀರ್ ಅಯ್ಯಪ್ಪ, ನಿರ್ದೇಶಕ ಬಿದ್ದಾಟಂಡ ಬೆಳ್ಯಪ್ಪ, ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ಇದ್ದರು.