ಶ್ರೀಮಂಗಲ, ನ. 25: ಹರಿಹರÀ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ 2ನೇ ದಿನದ ಉತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಪೂಜೆ ಸಲ್ಲಿಸಿ ಹರಕೆ ಒಪ್ಪಿಸಿದರು. ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಕ್ಷೀರಾಭಿಶೇಕ, ರುದ್ರಾಭಿಶೇಕ, ನಾಗಪೂಜೆ, ಮಹಾಪೂಜೆ, ತುಲಾಬಾರ, ತಲೆಮುಡಿ ಹರಕೆ, ಬೆಳ್ಳಿ ಸಾಮಗ್ರಿಗಳಿಂದ ಹರಕೆಯನ್ನು ದೇವರಿಗೆ ಹಾಕುವದು ಸೇರಿದಂತೆ ವಿಶೇಷ ಪೂಜೆಗಳು ನಡೆಯಿತು. ಮಧ್ಯಾಹ್ನ ಸಾಮೂಹಿಕ ಅನ್ನದಾನ ನಡೆಯಿತು. ಸಂಜೆ ದೇವರ ಅವಭೃತಸ್ನಾನ ಸಂದರ್ಭ ರಾತ್ರಿ 9 ಗಂಟೆಗೆ 11 ಸುತ್ತಿನ ಉತ್ಸವ ಮೂರ್ತಿ ಪ್ರದಕ್ಷಿಣೆ ನಡೆಯಿತು.