ಗೋಣಿಕೊಪ್ಪ ವರದಿ, ನ. 26 : ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಇಂದಿನಿಂದ ಮಂಗಳೂರು, ಮೈಸೂರು ವಿಶ್ವ ವಿದ್ಯಾಲಯ ಮಟ್ಟದ 21 ವರ್ಷದೊಳಗಿನ ಬಾಲಕರ ಹಾಕಿ ಟೂರ್ನಿ ತಾ.27ರಿಂದ (ಇಂದಿನಿಂದ) 4 ದಿನಗಳು ನಡೆಯಲಿದೆ.

ಗೋಣಿಕೊಪ್ಪ ಲಯನ್ಸ್, ಲಿಯೋ ಕ್ಲಬ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ನಡೆಯುವ ರಾಜ್ಯಮಟ್ಟದ ಅಂತರ್ ಕಾಲೇಜು ಟೂರ್ನಿಯಲ್ಲಿ ಮೈಸೂರು, ಮಂಗಳೂರು ವಿಶ್ವವಿದ್ಯಾಲಯ ಮಟ್ಟದ 17 ಕಾಲೇಜು ತಂಡಗಳು ಸ್ಪರ್ಧಿಸಲಿವೆ.

ಬೆಳಗ್ಗೆ 10.30 ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮೆಯಂಡ ಪೂಣಚ್ಚ, ಬುಟ್ಟಿಯಂಡ ಕುಟುಂಬ ಪಟ್ಟೆದಾರ ಬುಟ್ಟಿಯಂಡ ಅಪ್ಪಾಜಿ, ಲಯನ್ಸ್ ಜಿಲ್ಲಾ ಗವರ್ನರ್ ರೊನಾಲ್ಡ್ ಪಾಲ್ಗೊಳ್ಳಲಿದ್ದಾರೆ.