ಮಡಿಕೇರಿ, ನ. 26: ಮಂಗಳೂರಿನ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸ್‍ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಅಶ್ವಿನಿ ಆಸ್ಪತ್ರೆ, ರೋಟರಿ ಮಿಸ್ಟಿಹಿಲ್ಸ್ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿಂದು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಐಎಂಎ ಅಧ್ಯಕ್ಷರಾದ ಡಾ. ಮೋಹನ್ ಅಪ್ಪಾಜಿ, ರೋಟರಿ ಮಿಸ್ಟಿಹಿಲ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ವಿನೋದ್, ಲಯನ್ಸ್ ಅಧ್ಯಕ್ಷರಾದ ಕೆ.ಎ. ಬೊಳ್ಳಪ್ಪ, ಅಶ್ವಿನಿ ಆಸ್ಪತ್ರೆ ವೈದ್ಯರಾದ ಡಾ. ಹೆಬ್ಬಾರ್, ದಂತ ವೈದ್ಯೆ ಡಾ. ಧÀೃತಿ ಅಪ್ಪಚ್ಚು, ಪ್ರೊ. ಡಾ. ಚೇತನ್ ಹೆಗ್ಡೆ, ಮನೋಜ್ ಶೆಟ್ಟಿ, ಡಾ. ಭರತ್ ಶೆಟ್ಟಿ ಪಾಲ್ಗೊಂಡಿದ್ದರು.
ಶಿಬಿರದಲ್ಲಿ 8ರಿಂದ 10 ಸಾವಿರದವರೆಗಿನ ಕೃತಕ ಹಲ್ಲುಗಳನ್ನು ಉಚಿತವಾಗಿ ನೀಡಲಾಯಿತು. ಸುಮಾರು 40 ಮಂದಿಯ ತಂಡ ಶಿಬಿರವನ್ನು ನಿರ್ವಹಿಸಿತು. ಅಶ್ವಿನಿ ಆಸ್ಪತ್ರೆಯಲ್ಲಿ ದಂತ ಚಿಕಿತ್ಸಾ ವಿಭಾಗವನ್ನು ನೂತನ ತಂತ್ರಜ್ಞಾನಗ ಳೊಂದಿಗೆ ಆಧುನೀಕರಣಗೊಳಿ ಸಲಾಗಿದ್ದು, ದಂತ ಚಿಕಿತ್ಸೆ ಸಂಬಂಧ ಕಡಿಮೆ ವೆಚ್ಚದ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳ ಲಾಗಿದೆ. ಆಸ್ಪತ್ರೆಯಲ್ಲಿ ಆಗಿಂದಾಗ್ಗೆ ಉಚಿತ ದಂತ ತಪಾಸಣಾ ಶಿಬಿರಗಳು ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಡಾ. ಧÀೃತಿ ಅಪ್ಪಚ್ಚು ತಿಳಿಸಿದರು.