ಗೋಣಿಕೊಪ್ಪಲು, ನ. 26: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ತಾ. 28 ರಂದು ವೀರಾಜಪೇಟೆ ತಾಲೂಕು ಮಟ್ಟದ ವಿಕಲಚೇತನರ ಕ್ರೀಡಾಕೂಟವನ್ನು ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೋಣಿಕೊಪ್ಪಲು ಗ್ರಾ.ಪಂ., ಸತ್ಯಸಾಯಿ ಸೇವಾ ಸಂಸ್ಥೆ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವಿಕಲಚೇತನರಿಗೆ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಶ್ರವಣದೋಷವುಳ್ಳ ಮಕ್ಕಳಿಗೆ ಬಲೂನು ಹೊಡೆಯುವ ಸ್ಪರ್ಧೆ, ಬಟಾಣಿ ಹೆಕ್ಕುವದು, ಸೂಜಿಗೆ ದಾರ ಹಾಕುವದು ಹಾಗೂ ಬೊಟ್ಟು ಹಾಕುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದೃಷ್ಟಿ ದೋಷವುಳ್ಳವರಿಗೆ ವೇಗದ ನಡಿಗೆ, ಸಂಗೀತ ಸ್ಪರ್ಧೆ, ಬುದ್ದಿಮಾಂದ್ಯರಿಗೆ ಕಪ್ಪೆ ಜಿಗಿತ, ಬುಕ್ ಬ್ಯಾಲೆನ್ಸ್, 100 ಮೀ. ಓಟದ ಸ್ಪರ್ಧೆ, ನಿಂಬೆ ಹಣ್ಣು ಮತ್ತು ಚಮಚ, ಪೆÇಟೇಟೋ ರೇಸ್, ದೈಹಿಕ ವಿಕಲಚೇತನರಿಗೆ ರಿಂಗ್ ಎಸೆತ, ವಿಕೆಟ್ ಎಸೆತ ಹಾಗೂ ಸಂಗೀತ ಕುರ್ಚಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.