ಸಿದ್ದಾಪುರ, ನ. 26: ಕರಡಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ನಿವೃತ ಕಮಾಂಡರ್ ಕಂಬೀರಂಡ ದೇವಯ್ಯ ಉದ್ಘಾಟಿಸಿದರು. ಕ್ರೀಡಾಕೂಟವನ್ನು ನಿವೃತ ಶಿಕ್ಷಕರಾದ ಪಿ.ಅಯ್ಯಣ್ಣ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಯ ಮಕ್ಕಳು ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು, ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೊಕೇಶ್ ಮಾತನಾಡಿ, ಶಿಕ್ಷಣ ಶ್ರೇಷ್ಠ ಸಂಪತ್ತಾಗಿದ್ದು, ಪ್ರತಿಯೊಬ್ಬರು ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಜ್ರ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಡಿ ನಾಣಯ್ಯ, ಶಾಲೆಯನ್ನು ದತ್ತು ಪಡೆದ ಇವಾಲ್ವ್ ಬ್ಯಾಕ್ ರೆಸಾರ್ಟ್‍ನ ಪ್ರಧಾನ ವ್ಯವಸ್ಥಾಪಕಿ ಕಾಂತಿ ಅನೀಶ್, ಕಂಬೀರಂಡ ನಂದ ಗಣಪತಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ, ಗ್ರಾ.ಪಂ ಅಧ್ಯಕ್ಷ ಮಣಿ, ಸದಸ್ಯರಾದ ಪೂವಮ್ಮ, ಕರ್ಪಯ್ಯ, ಜಾಗ ದಾನಿಗಳಾದ ಕುಕ್ಕುನೂರು ಚಂದ್ರಕುಮಾರ್, ಕಟ್ಟಡ ದಾನಿಗಳಾದ ಟಿ.ಎಂ ಮೋಹನ್, ಗ್ರಾಮಸ್ಥರಾದ ಜೇಕಬ್ ಚೆರಿಯಾನ್, ಕೆ.ಬಿ ಪ್ರಭಾಕರ್, ಸಮಾಜ ಸೇವಕ ಜೋಸೆಫ್ ಶ್ಯಾಂ, ಸಂಪನ್ಮೂಲ ವ್ಯಕ್ತಿ ಕರುಂಬಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
ಮುಖ್ಯ ಶಿಕ್ಷಕಿ ಮೋಳಿ ಸ್ವಾಗತಿಸಿ, ಶಿಕ್ಷಕರುಗಳಾದ ರುಕ್ಮಿಣಿ ಹಾಗೂ ಅಶ್ರಫ್ ನಿರೂಪಿಸಿದರು.
ಇದೇ ಸಂದರ್ಭ ಶಾಲಾ ಮಕ್ಕಳಿಗೆ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.