ಸೋಮವಾರಪೇಟೆ, ನ. 27: ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ 31ನೇ ವರ್ಷದ ರಾಜ್ಯ ಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟ ಡಿ. 15 ಮತ್ತು 16 ರಂದು ಸಾಕಮ್ಮ ಬಂಗಲೆಯ ಮುಂಭಾಗದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಹೇಳಿದರು. ರಾಜ್ಯ ಮಟ್ಟದ ಪ್ರಮುಖ ತಂಡಗಳು ಭಾಗವಹಿಸಲಿವೆ. ಪ್ರಥಮ 10 ಸಾವಿರ ರೂ. ದ್ವಿತೀಯ 5 ಸಾವಿರ, ತೃತೀಯ 2,500 ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವದು. ತಂಡಗಳಿಗೆ ಮೈದಾನ ಶುಲ್ಕ 800 ರೂ.ಗಳಿರುತ್ತದೆ. ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ ನೀಡಲಾಗುವದು. ವಿಶೇಷವಾಗಿ ಶಾಲಾ ಮಕ್ಕಳ ತಂಡಗಳಿಗೆ ಕಬಡ್ಡಿ ಸ್ಪರ್ಧೆ ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಮೊ: 9449791791, 9481578256 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಡಿ. 16 ರ ಸಂಜೆ ಬಹುಮಾನ ವಿತರಣೆ ಸಮಾರಂಭ ಹಾಗೂ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 100ನೇ ಜನ್ಮದಿನಾಚರಣೆ ಆಚರಿಸಲಾಗುವದು ಎಂದು ಹೇಳಿದರು.

ಉಪವಾಸ ಸತ್ಯಾಗ್ರಹ: ಸಂಘದ ಮನವಿ ಮೇರೆಗೆ ಸರ್ಕಾರ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ತೆರಯಲು ಅನುಮತಿ ನೀಡಿದೆ. ಸೂಕ್ತ ಸ್ಥಳವನ್ನು ಗುರುತಿಸಿ, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆ ಪಟ್ಟಣ ಪಂಚಾಯಿತಿಗೆ ಪತ್ರ ಬರೆದಿದೆ. ಕೆಎಸ್‍ಆರ್‍ಟಿಸಿ ಪಕ್ಕದ ಜಾಗ, ಹಳೆ ಪೊಲೀಸ್ ಠಾಣೆ ಜಾಗ ಹಾಗೂ ಸಿ.ಕೆ. ಸುಬ್ಬಯ್ಯ ರಸ್ತೆಯ ವಾಣಿಜ್ಯ ಮಳಿಗೆಯ ಮುಂಭಾಗದ ವಿಶಾಲವಾದ ಜಾಗದಲ್ಲಿ ಕ್ಯಾಂಟಿನ್ ತೆರೆಯಲು ಸೂಕ್ತವಾದ ಸ್ಥಳವಾಗಿದೆ. ಆದರೆ ಪಂಚಾಯಿತಿ ಅಸಡ್ಡೆಯಿಂದ ಒಂದು ಅಶುಚಿತ್ವದಿಂದ ಕೂಡಿರುವ ಜಾಗವನ್ನು ಗುರುತಿಸಲು ಮುಂದಾಗಿದೆ. ಸೂಕ್ತ ಜಾಗವನ್ನು ಇಂದಿರಾ ಕ್ಯಾಂಟಿನ್‍ಗೆ ನೀಡಬೇಕು ತಪ್ಪಿದಲ್ಲಿ ಪಟ್ಟಣ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುವದು ಎಂದು ಎಚ್ಚರಿಸಿದರು.