ಸೋಮವಾರಪೇಟೆ, ನ. 27: ಕುಟುಂಬ ಕಲ್ಯಾಣ ಯೋಜನೆ ಗಳನ್ನು ಅಳವಡಿಸಿಕೊಂಡ ಕುಟುಂಬಗಳಿಗೆ ಮಾತ್ರ ಸರ್ಕಾರದ ಯೋಜನೆಗಳು ಸಿಗು ವಂತಾಗಬೇಕು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇವರುಗಳ ಆಶ್ರಯದಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವ್ಯಾಸೆಕ್ಟಮಿ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯಾ ಸ್ಫೋಟದಿಂದ ದೇಶದ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ದೇಶದ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಏಕನೀತಿ ಸಂಹಿತೆ ಜಾರಿಯಾಗಬೇಕು. ಪ್ರತಿಯೊಬ್ಬರು ಕುಟುಂಬದಲ್ಲಿ ಎರಡೇ ಮಕ್ಕಳು ಸಾಕೆಂಬ ಪ್ರತಿಜ್ಞೆ ತೆಗೆದುಕೊಳ್ಳಬೇಕು. ಕುಟುಂಬದಲ್ಲಿ ಹೆಣ್ಣಿನ ಬಗ್ಗೆ ತಾತ್ಸಾರ ಸಲ್ಲದು ಎಂದರು.

ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಸಮಾಜದಲ್ಲಿರುವ ಮೂಢನಂಬಿಕೆ ಯಿಂದ ಕುಟುಂಬ ಕಲ್ಯಾಣ ಯೋಜನೆಗಳು ಯಶಸ್ವಿಯಾಗುತ್ತಿಲ್ಲ. ಯೋಜನೆಯಲ್ಲಿ ಪುರುಷರ ಸಹಭಾಗಿತ್ವ ಇರಲೇಬೇಕು. ಎಲ್ಲಾ ಒತ್ತಡಗಳಿಂದ ಹೈರಾಣದ ಹೆಣ್ಣು, ಕುಟುಂಬ ಯೋಜನೆಗೂ ಒಳಪಡುತ್ತಾಳೆ. ಈ ಕಾರಣದಿಂದಲೇ ಬಾಣಂತಿರ ಸಾವು ಜಾಸ್ತಿಯಾಗುತ್ತಿದೆ. ಬಾಣಂತಿಯರು ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿರುವ ಸಂದರ್ಭ ಮಾನವೀಯ ದೃಷ್ಟಿಯಿಂದಲಾದರೂ ಪುರುಷರು ವ್ಯಾಸೆಕ್ಟಮಿ ಮಾಡಿಸಿ ಕೊಂಡು, ಕುಟುಂಬದ ಜವಾಬ್ದಾರಿ ಹೊರಬೇಕು ಎಂದು ಹೇಳಿದರು. ವ್ಯಾಸೆಕ್ಟಮಿಯಿಂದ ಯಾವುದೇ ರೀತಿಯ ಲೈಂಗಿಕ ನಿಶ್ಯಕ್ತಿ ಹಾಗು ಪುರುಷತ್ವಕ್ಕೆ ಕುಂದು ಉಂಟಾಗುವ ದಿಲ್ಲ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬ ವಿಷಯ ವನ್ನು ಅರಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್. ಶಸ್ತ್ರಚಿಕಿತ್ಸಕ ಡಾ. ಆನಂದ್, ಗೌಡಳ್ಳಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ. ಇಂದೂಧರ್, ಬಿಎಚ್‍ಇಓ ಹೆಚ್.ಕೆ. ಶಾಂತಿ ಇದ್ದರು. ಶಿಬಿರದಲ್ಲಿ 5 ಮಂದಿ ಪುರುಷರು ಹಾಗೂ 14 ಮಹಿಳೆ ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು.