ವೀರಾಜಪೇಟೆ, ನ. 28: ವೀರಾಜಪೇಟೆಯಿಂದ ಮೈಸೂರಿಗೆ ತನ್ನ ಸ್ನೇಹಿತೆಯೊಂದಿಗೆ ತೆರಳುತ್ತಿದ್ದ ಕಾರನ್ನು ಇಂದು ಬೆಳಿಗ್ಗೆ ಬಿಟ್ಟಂಗಾಲದಿಂದ ಕೇರಳಕ್ಕೆ ಹೋಗುವ ಬಿಟ್ಟಂಗಾಲ ಜಂಕ್ಷನ್‍ನಲ್ಲಿ ಆರು ಮಂದಿ ಯುವಕರು ತಡೆದು ಕಾರಿನ ಚಾಲಕ ಟಿ.ವೈ. ಅಶೋಕ್ (28) ಎಂಬಾತನ ಮೇಲೆ ಹಲ್ಲೆ ನಡೆಸಿದರೊಂದಿಗೆ ಕಾರಿನ ಗ್ಲಾಸ್‍ಗಳನ್ನು ದೊಣ್ಣೆಯಿಂದ ಹೊಡೆದು ಪುಡಿ ಮಾಡಿದ್ದಾರೆ.

ಅಶೋಕ್ ವೀರಾಜಪೇಟೆಯಿಂದ ಗೆಳತಿಯೊಂದಿಗೆ ಮಾರುತಿ ಕಾರಿನಲ್ಲಿ ತೆರಳುತ್ತಿದ್ದಾಗ ಇಲ್ಲಿನ ಸೆರಿನಿಟಿ ಮುಂಭಾಗದಲ್ಲಿ ಕೆಲವು ಆಸಕ್ತ ಯುವಕರ ಗುಂಪು ನೋಡಿ ಅನ್ಯಕೋಮಿನ ಯುವಕ ಹಿಂದೂ ಯುವತಿಯನ್ನು ಅಪಹರಿಸಿ ಕಾರಿನಲ್ಲಿ ತೆರಳುತ್ತಿದ್ದಾನೆ ಎಂಬ ಅನಾಮಧೇಯದ ವದಂತಿಯಿಂದ ಯುವಕರ ಗುಂಪು ಬೈಕ್‍ಗಳಲ್ಲಿ ಕಾರನ್ನು ಹಿಂಭಾಲಿಸಿ ಬಿಟ್ಟಂಗಾಲದ ಜಂಕ್ಷನ್‍ನಲ್ಲಿ ಕಾರನ್ನು ತಡೆದು ಅಶೋಕ್ ಮೇಲೆ ಹಲ್ಲೆ ನಡೆಸಿ ಕಾರಿಗೂ ಜಖಂಗೊಳಿಸಿದ್ದರಿಂದ ಸುಮಾರು ರೂ. 20,000 ನಷ್ಟ ಸಂಭವಿಸಿದೆ.

ಅಶೋಕ್ ಹಲ್ಲೆ ನಡೆಸಿದ ಗುಂಪಿನ ವಿರುದ್ದ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಕಾರನ್ನು ವಶ ಪಡಿಸಿಕೊಂಡು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ನಡೆಸಿದ ಗುಂಪಿನಲ್ಲಿದ್ದ ವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಕಾರು ಜಖಂ ಹಾಗೂ ಅಶೋಕ್‍ನ ಮೇಲೆ ಹಲ್ಲೆಯ ನಂತರ ಯುವತಿ (23) ಮನೆಗೆ ತೆರಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಬಂಧನ: ಹಲವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಗಗನ್, ವಿಜಯ್ ಎಂಬಿಬ್ಬರನ್ನು ಬಂಧಿಸಿದ್ದು, ನಿಶಾಂತ್ ಎಂಬಾತನು ತಲೆಮರೆಸಿಕೊಂಡಿರು ವದಾಗಿ ವೃತ್ತ ನಿರೀಕ್ಷಕ ಎನ್.ಕುಮಾರ್ ಆರಾಧ್ಯ ತಿಳಿಸಿದ್ದಾರೆ.

ಯುವತಿ ಇಲ್ಲಿನ ನೆಹರೂ ನಗರದ ನಿವಾಸಿಯಾಗಿದ್ದು, 20 ದಿನಗಳ ಹಿಂದೆ ತಿತಿಮತಿಯ ಚಿನ್ನಂಗೊಲ್ಲಿಂiÀi ಬಾಳಾಜಿ ಗ್ರಾಮದ ನಿವಾಸಿ ಶುಂಠಿ ವ್ಯಾಪಾರಿ ಟಿ.ವೈ. ಅಶೋಕ್‍ನ ಪರಿಚಯವಾಗಿದ್ದು, ನಂತರ ಇವರಿಬ್ಬರ ನಡುವೆ ಸ್ನೇಹ ಸಂಬಂಧ ಏರ್ಪಟ್ಟಿರಬಹುದೆಂದು ಪೊಲೀಸ್ ವಲಯದಲ್ಲಿ ಶಂಕಿಸಲಾಗಿದೆ.

ಮೂವರ ವಿರುದ್ಧ ಐ.ಪಿ.ಸಿ. ವಿಧಿ 427, 341, 323, 324, 506 ಪ್ರಕಾರ ಪ್ರಕರಣ ದಾಖಲಿಸಲಾಗಿದೆ.