ಮೂರ್ನಾಡು, ಡಿ. 14 : ಕೋಡಂಬೂರು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ತಾ. 17 ಮತ್ತು 18ರಂದು ಚಂಡಿಕಾ ಹವನ ನಡೆಯಲಿದೆ.

ತಾ. 17ರಂದು ಸಂಜೆ 4ಗಂಟೆಯಿಂದ 9.30 ಗಂಟೆವರೆಗೆ ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ ಯೋಜನೆ, ಗುರು ಗಣಪತಿ ಪೂಜನ, ಪುಣ್ಯಾಹ ವಾಚನ, ಋತ್ವಿಕ್ ವರಣನ, ನವಚಂಡಿ ಪಾರಾಯಣ, ಮಹಾಪೂಜೆ, ಅಷ್ಠಾವಧಾನ ಸೇವೆ, ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ತಾ. 18ರಂದು ಬೆಳಿಗ್ಗೆ 7-30 ಗಂಟೆಯಿಂದ ಗುರು ಗಣಪತಿ ಪೂಜೆÀ, ಪುಣ್ಯಾಹ ವಾಚನ, ಮಹಾಗಣಪತಿ ಹವನ, ಚಂಡಿಕಾ ಪಾರಾಯಣ, ನವಚಂಡಿ ಹವನ, ಸರ್ವಾಲಂಕಾರ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆ ಬಳಿಕ ಉತ್ಸವ ಮೂರ್ತಿ ನೃತ್ಯ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.