ಒಡೆಯನಪುರ, ಡಿ. 14: ಶನಿವಾರಸಂತೆ ರೋಟರಿ ಕ್ಲಬ್ ಹಾಗೂ ಹಾಸನದ ಜನಪ್ರಿಯ ಇಂಡಿಯನ್ ಹಾರ್ಟ್ ಲೈಫ್ ಲೈನ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ತಾ. 17 ರಂದು ಶನಿವಾರಸಂತೆ ಆರ್,ವಿ.ಕಲ್ಯಾಣ ಮಂಟಪದಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಸ್. ವಸಂತ್‍ಕುಮಾರ್ ಮಾಹಿತಿ ನೀಡಿದರು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಹಾಸನ ಜನಪ್ರಿಯ ಆಸ್ಪತ್ರೆಯ ಹೃದಯರೋಗ ತಜ್ಞ ಡಾ.ಚಿನ್ನನಾಗಪ್ಪ ಅವರ ನೇತೃತ್ವದಲ್ಲಿ ವೈದ್ಯರ ತಂಡ ಶಿಬಿರದಲ್ಲಿ ಹೃದ್ರೋಗಿಗಳಿಗೆ ತಪಾಸಣೆ ಹಾಗೂ ಸಮಾಲೋಚನೆ ನಡೆಸಲಾಗುತ್ತದೆ ಎಂದರು. ಶಿಬಿರದಲ್ಲಿ ಅವಶ್ಯಕತೆ ಇರುವ ರೋಗಿಗಳಿಗೆ ಉಚಿತವಾಗಿ ಇ.ಸಿ.ಜಿ ಮತ್ತು ಎಕೋ ತಪಾಸಣೆಯನ್ನು ನಡೆಸಲಾಗುವದು. ತಪಾಸಣೆಗೆ ಬರುವವರು ತಮ್ಮ ಹಳೆಯ ವೈದ್ಯಕೀಯ ದಾಖಲಾತಿ ಯನ್ನು ತರಬೇಕಾಗುತ್ತದೆ. ಹೆಸರು ನೋಂದಾಯಿಸಲು ಮೊ.ನಂ. 7618798532 ಸಂಪರ್ಕಿಸ ಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಕೊಡ್ಲಿಪೇಟೆಯ ವೈದ್ಯ ಡಾ.ಸಿ.ಆರ್.ಉದಯ್‍ಕುಮಾರ್, ಶನಿವಾರಸಂತೆ ರೋಟರಿ ಕ್ಲಬ್ ಕಾರ್ಯದರ್ಶಿ ಎಸ್.ಎಸ್.ಸಾಗರ್, ಪದಾಧಿಕಾರಿಗಳಾದ ಎಚ್.ಪಿ. ಮೋಹನ್, ಚಂದನ್, ಎ.ಡಿ. ಮೋಹನ್‍ಕುಮಾರ್ ಹಾಜರಿದ್ದರು.