ಮಡಿಕೇರಿ, ಡಿ. 15: ಕೊಡಗು ಜಿಲ್ಲೆಯ ವುಶ್ ಸಂಸ್ಥೆಯಿಂದ ನಡೆಯಲಿರುವ ಸಬ್ ಜೂನಿಯರ್ ಮತ್ತು ಸೀನಿಯರ್ ಬಾಯ್ಸ್ ಅಂಡ್ ಗಲ್ರ್ಸ್ ಸ್ಪರ್ಧೆ ತಾ. 21 ರಿಂದ 24 ರವರೆಗೆ ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ನಡೆಯಲಿದೆ. 16ನೇ ರಾಜ್ಯಮಟ್ಟದ ವುಶ್ ಸ್ಪರ್ಧೆಗೆ ಬೆಟ್ಟಗೇರಿಯ ಉದಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಎ.ಎಸ್. ಸುದರ್ಶನ್ (7ನೇ ತರಗತಿ), ಪಿ.ಬಿ. ಧನುಶ್ (7ನೇ ತರಗತಿ) ಮತ್ತು ಪಿ.ಎನ್. ಜೀವನ್ (2ನೇ ತರಗತಿ) ಹಾಗೂ ಕೇಂದ್ರಿಯ ವಿದ್ಯಾಲಯ ಮಡಿಕೇರಿಯ 6ನೇ ತರಗತಿ ವಿದ್ಯಾರ್ಥಿ ಪಿ.ಆರ್. ಯಶಸ್ ಆಯ್ಕೆಗೊಂಡಿದ್ದಾರೆ.