ಮಡಿಕೇರಿ, ಡಿ. 15 : ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯ ಜಿಲ್ಲಾ ಮಟ್ಟದ ಆಯ್ಕೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅಧ್ಯಕ್ಷತೆಯಲ್ಲಿ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ ಉಪಸ್ಥಿತಿ ಯಲ್ಲಿ ಸಭೆ ನಡೆಯಿತು.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ ಜಿಲ್ಲೆಯಲ್ಲಿ 25,957 ಅನಿಲ ರಹಿತ ಕಾರ್ಡುದಾರರು ಇದ್ದು, ಪ್ರಥಮ ಹಂತದಲ್ಲಿ 8,257 ಮಂದಿಯನ್ನು ಅನಿಲಭಾಗ್ಯ ಯೋಜನೆಗೆ ಆಯ್ಕೆ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಕೆ.ಜಿ, ಬೋಪಯ್ಯ ಅವರು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆದುಕೊಂಡವರನ್ನು ಬಿಟ್ಟು ಉಳಿದವರನ್ನು ಆಯ್ಕೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅವರು ಸಲಹೆ ಮಾಡಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದಿರುವವರಿಗೆ ಈ ಸೌಲಭ್ಯವಿದ್ದು, ಪಟ್ಟಿ ನೀಡುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ಈಗಾಗಲೇ ನೀಡಲಾಗಿರುವ ಮಾಹಿತಿಯಂತೆ ಒಂದು ವಾರದಲ್ಲಿ ಮಾಹಿತಿ ಪಟ್ಟಿ ಒದಗಿಸುವಂತೆ ಶಾಸಕರಿಗೆ ತಿಳಿಸಿದರು. ಡಿಸೆಂಬರ್ ಅಂತ್ಯದೊಳಗೆ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸ ಲಾಯಿತು.
ಅರಣ್ಯ ಅಧಿಕಾರಿಗಳಿಗೆ ನೋಟೀಸ್
ಸಮಿತಿ ಸದಸ್ಯರಲ್ಲಿ ಒಬ್ಬರಾದ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ತೆರಳಿದ್ದಾರೆ. ಇಂತವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದರು.
ಈ ಕುರಿತು ಪ್ರತಿಕ್ರಿಯಿಸಿದ ಎಂ.ಆರ್.ಸೀತಾರಾಂ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಮತ್ತು ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಆಗಮಿಸಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಗೈರು ಆಗಿರುವ ಸಂಬಂಧ ನೋಟೀಸು ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿ ಡಿಸೆಂಬರ್ ಅಂತ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಕೊಡ್ಲಿಪೇಟೆ-ವೀರಾಜಪೇಟೆ, ವೀರಾಜಪೇಟೆ-ಬೈಂದೂರು, ಮಡಿಕೇರಿ-ಭಾಗಮಂಡಲ ರಸ್ತೆಗಳು ಗುಂಡಿ ಬಿದ್ದಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು ಅವರು. ರಸ್ತೆ ನಿರ್ಮಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಲು ಮುಂದಾದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕೆ.ಜಿ.ಬೋಪಯ್ಯ ಅವರು ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಕಾರ್ಯಾದೇಶವನ್ನೇ ನೀಡಿಲ್ಲ. ರಸ್ತೆ ಯಾವಾಗ ನಿರ್ಮಾಣ ಮಾಡುವದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು ಅವರನ್ನು ಲಾಯಿತು.
ಅರಣ್ಯ ಅಧಿಕಾರಿಗಳಿಗೆ ನೋಟೀಸ್
ಸಮಿತಿ ಸದಸ್ಯರಲ್ಲಿ ಒಬ್ಬರಾದ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದೆ ಬೆಳಗಾವಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟಕ್ಕೆ ತೆರಳಿದ್ದಾರೆ. ಇಂತವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದರು.
ಈ ಕುರಿತು ಪ್ರತಿಕ್ರಿಯಿಸಿದ ಎಂ.ಆರ್.ಸೀತಾರಾಂ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಮತ್ತು ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಆಗಮಿಸಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಗೈರು ಆಗಿರುವ ಸಂಬಂಧ ನೋಟೀಸು ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿ ಡಿಸೆಂಬರ್ ಅಂತ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಕೊಡ್ಲಿಪೇಟೆ-ವೀರಾಜಪೇಟೆ, ವೀರಾಜಪೇಟೆ-ಬೈಂದೂರು, ಮಡಿಕೇರಿ-ಭಾಗಮಂಡಲ ರಸ್ತೆಗಳು ಗುಂಡಿ ಬಿದ್ದಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು ಅವರು. ರಸ್ತೆ ನಿರ್ಮಿಸಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಲು ಮುಂದಾದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕೆ.ಜಿ.ಬೋಪಯ್ಯ ಅವರು ರಸ್ತೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಕಾರ್ಯಾದೇಶವನ್ನೇ ನೀಡಿಲ್ಲ. ರಸ್ತೆ ಯಾವಾಗ ನಿರ್ಮಾಣ ಮಾಡುವದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪ್ರಭು ಅವರನ್ನು ಸಚಿವ ಎಂ.ಆರ್.ಸೀತಾರಾಂ ಅವರಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ನೇತೃತ್ವದಲ್ಲಿ ಸ್ಥಳೀಯರು ಘೇರಾವ್ ಹಾಕಿದ ಘಟನೆ ನಡೆಯಿತು. ಇದರಿಂದ ಸಿಟ್ಟುಗೊಂಡಂತೆ ಕಂಡುಬಂದ ಸಚಿವರು ಕಟ್ಟಡ ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೇ ಹಿಂತೆರಳಿದ ಪ್ರಸಂಗ ಎದುರಾಯಿತು.
ಇಂದು ಮಧ್ಯಾಹ್ನ ಸಚಿವರಿಂದ ಉದ್ಘಾಟನೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆಸ್ಪತ್ರೆಗೆ ಸೂಕ್ತ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಿ ನಂತರ ಉದ್ಘಾಟಿಸಬೇಕು. ತಪ್ಪಿದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಸ್.ಜಿ.ಮೇದಪ್ಪ ಮೊನ್ನೆಯೇ ಎಚ್ಚರಿಸಿದ್ದರು. ಈ ಹಿನ್ನೆಲೆ ಇಂದು
ಆಸ್ಪತ್ರೆಯ ಸಮೀಪ ಉಸ್ತುವಾರಿ ಸಚಿವರ ಕಾರು ಬಂದು ನಿಲ್ಲುತ್ತಿದ್ದಂತೆ ಎಸ್.ಜಿ. ಮೇದಪ್ಪ ಸೇರಿದಂತೆ ಸ್ಥಳೀಯರು ತಡೆದರು. ಇದರಿಂದ ಸಿಡಿಮಿಡಿಗೊಂಡ ಸಚಿವರು ಕಾರಿನಿಂದ ಇಳಿಯಲು ಬಿಡಿ, ಆಸ್ಪತ್ರೆಯ ಒಳಗೆ ಎಲ್ಲರ ಅಹವಾಲನ್ನು ಆಲಿಸುತ್ತೇನೆ ಎಂದರು.
ಸೌಲಭ್ಯ ಕಲ್ಪಿಸಿ: ಮೊದಲು ಮನವಿ ಆಲಿಸಿ ನಂತರ ಒಳಗೆ ಹೋಗಿ. ಈ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಸ್ಟ್ಯಾಫ್ ನರ್ಸ್ ಇಲ್ಲ. ತುರ್ತು ಸಂದರ್ಭದಲ್ಲಿ ಇಂಜೆಕ್ಷನ್ ಸಹ ನೀಡಲು ನರ್ಸ್ ಇಲ್ಲ. ಓರ್ವ ಕ್ಲೀನರ್, ಮತ್ತೋರ್ವ ಅಟೆಂಡರ್ ಬಿಟ್ಟರೆ ಆಸ್ಪತ್ರೆ ಖಾಲಿಯಾಗಿದೆ. ಕೋಟಿ ವೆಚ್ಚದ ಆಸ್ಪತ್ರೆ ಸರ್ಕಾರ ಕಟ್ಟಿರೋದು ಜನರಿಗೆ ಉಪಯೋಗ ಆಗಲಿ ಎಂಬ ಉದ್ದೇಶದಿಂದ. ಎಂದು ಮೇದಪ್ಪ ಗಮನ ಸೆಳೆದರು.
ನಿಮ್ಮ ಅಹವಾಲು ಆಲಿಸುತ್ತೇನೆ. ಮೊದಲು ಒಳಗೆ ನಡೆಯಿರಿ ಎಂದು ಮುಂದೆ ಸಾಗಿದ ಸಚಿವರು, ಕಟ್ಟಡವನ್ನು ಉದ್ಘಾಟಿಸಿ ಒಳ ಹೋದರು. ನಂತರ ಮೇದಪ್ಪ ಸೇರಿದಂತೆ ಗ್ರಾಮದ ಪ್ರಮುಖರನ್ನು ಒಳ ಕರೆದು ಅಹವಾಲು ಆಲಿಸಿದರು.
ಕಳೆದ ಹಲವಾರು ವರ್ಷಗಳಿಂದ ಆಸ್ಪತ್ರೆಗೆ ವೈದರು ಬರುತ್ತಿಲ್ಲ. ಆರು ಸಿಬ್ಬಂದಿಗಳ ಪೈಕಿ, ನಾಲ್ಕು ಮಂದಿ ಗ್ರಾಮೀಣ ಭಾಗದಲ್ಲಿ ಕರ್ತವ್ಯಕ್ಕೆ ತೆರಳುತ್ತಾರೆ. ಎಂಬಿಬಿಎಸ್ ವ್ಯಾಸಂಗ ಮಾಡಿದ ವೈದ್ಯರನ್ನು ಈ ಆಸ್ಪತ್ರೆ ಕಂಡಿಲ್ಲ. ಕೂಡಲೆ ತಜ್ಞ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು ಎಂದು ಮೇದಪ್ಪ ಒತ್ತಾಯಿಸಿದರು.
ವೈದ್ಯರಿಗೆ ಯಾಕ್ರೀ ಹೊಡೀಬೇಕು: ಸೋಮವಾರಪೇಟೆಗೆ ವೈದ್ಯರನ್ನು ನೇಮಿಸಿದರೆ ಹೊಡೆದು ಕಳುಹಿಸುತ್ತಾರೆ. ಯಾರ್ರೀ ಇಲ್ಲಿ ಕೆಲಸ ಮಾಡೋಕೆ ಬರ್ತಾರೆ. ನಾವು ಕಾಡಿ ಬೇಡಿ ವೈದ್ಯರನ್ನು ನೇಮಿಸಿದರೆ ಇಟ್ಟುಕೊಳ್ಳುವದಿಲ್ಲ. ಯಾಕ್ರೀ ಹೊಡೀಬೇಕು ವೈದ್ಯರಿಗೆ? ಎಂದು ಸಚಿವರು ಆಕ್ರೋಶಿತರಾಗಿ ಪ್ರಶ್ನಿಸಿದರು.
ಶಾಂತಳ್ಳಿ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಲಾಗುತ್ತದೆ. ಸ್ಥಳೀಯರು ಎಂಬಿಬಿಎಸ್ ಮಾಡಿದ್ದರೆ, ಅವರ ಮನವೊಲಿಸಿ, ಗ್ರಾಮೀಣ ಭಾಗದಲ್ಲಿ ವೈದ್ಯ ವೃತ್ತಿ ನಿರ್ವಹಿಸಲು ಮುಂದೆ ಬಂದರೆ ಜಿಲ್ಲಾಧಿಕಾರಿ ನೇಮಕಾತಿ ಮಾಡಲಿದ್ದಾರೆ ಎಂದು ಸಚಿವರು ಸಲಹೆ ನೀಡಿದರು.
ಸಚಿವರಿಗೆ ಸವಾಲ್- ಮತ್ತೆ ಗರಂ: ವೈದ್ಯರ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭ ಕಾಂಗ್ರೆಸ್‍ನ ಕೆಲ ಪ್ರಮುಖರು ಎಸ್.ಜಿ.ಮೇದಪ್ಪ ಅವರ ಮಗ ಹಾಗೂ ಸೊಸೆ ಎಂಬಿಬಿಎಸ್ ಮಾಡಿದ್ದಾರೆ. ಅವರೇ ಇಲ್ಲಿಗೆ ಬರಲಿ ಎಂದರು. ಇದಕ್ಕೆ ಸಚಿವರು ನಿಮ್ಮ ಮಗನನ್ನೇ ಕಳಿಸಿ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಮೇದಪ್ಪ, ಸರ್ಕಾರದಿಂದ ಅಸ್ಪತ್ರೆಗೆ ವೈದ್ಯರನ್ನು ನೇಮಿಸಲು ಆಗುವದಿಲ್ಲ ಎಂದು ಬರೆದು ಕೊಡಿ, ನಾವೇ ಮುಂದು ವರೆಯುತ್ತೇವೆ ಎಂದರು. ಈ ಸಂದರ್ಭ ಸಚಿವರು ಮತ್ತೆ ಗರಂ ಆದರು.
ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಅವರಿಗೆ, ತಕ್ಷಣ ಶಾಂತಳ್ಳಿ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳಿ. ನಿವೃತ್ತಿಯಾಗಿರುವ ಅಥವಾ ಸ್ಥಳೀಯವಾಗಿ ವೈದ್ಯರಿದ್ದರೆ ನಿಯೋಜಿಸಲು ಕ್ರಮ ಕೈಗೊಳ್ಳಿ. ಸ್ಯ್ಟಾಫ್ ನರ್ಸ್ ಓರ್ವರನ್ನು ನೇಮಿಸಿ ಎಂದು ಸಚಿವರು ಸೂಚಿಸಿದರು.
ಆಸ್ಪತ್ರೆ ಉದ್ಘಾಟಿಸಿದ ನಂತರ ಸಭಾ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಿಸಲಾಗಿತ್ತಾದರೂ ಸಿಡಿಮಿಡಿಯಾಗಿದ್ದ ಸಚಿವರು ಸಭಾ ಕಾರ್ಯಕ್ರಮದ ವೇದಿಕೆಗೆ ಹೋಗದೆ, ನೇರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಅವರ ಮನೆಗೆ ತೆರಳಿ ಅಲ್ಲಿ ಸುಮಾರು 15 ನಿಮಿಷಗಳ ಕಾಲ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಮಡಿಕೇರಿಗೆ ತೆರಳಿದರು.