ಕೂಡಿಗೆ, ಡಿ. 15: ಯಲಕನೂರು ಮೀಸಲು ಅರಣ್ಯದ ತೇಗದ ನಡುತೋಪಿಂದ ಅಕ್ರಮವಾಗಿ ತೇಗದ ಮರಗಳನ್ನು ಕಡಿದು, ತೇಗದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಲು ಸಹಿತ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡ ಅರಣ್ಯಾಧಿಕಾರಿಗಳು ಯಲಕನೂರು ಸಮೀಪದಿಂದ ಹೊರ ಜಿಲ್ಲೆಗೆ ಮಹಿಂದ್ರ ಮಿನಿ ವಾಹನ (ಕೆ.ಎ.12.3834)ದಲ್ಲಿ ಸಾಗಿಸುತ್ತಿದ್ದ ಮರದ ನಾಟಗಳನ್ನು ವಾಹನ ಸಹಿತ ವಶಪಡಿಸಿಕೊಂಡು, ಆರೋಪಿಗಳಾದ ಸುದೀಪ್, ಪ್ರವೀಣ, ಪ್ರಕಾಶ್ ಇವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸತೀಶ್‍ಕುಮಾರ್, ಅರಣ್ಯ ರಕ್ಷಕ ಹೆಚ್.ಬಿ.ರಾಜಣ್ಣ, ಗಣೇಶ್, ಅರಣ್ಯ ವೀಕ್ಷಕರಾದ ವೀರಪ್ಪ, ದಿವಾಕರ, ವಿರೂಪಾಕ್ಷ, ಚಾಲಕ ವಿಜಯ್ ಇದ್ದರು. ಹೆಬ್ಬಾಲೆ ಉಪ ವಲಯ ಅರಣ್ಯ ಕಛೇರಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.