ಶ್ರೀಮಂಗಲ, ಡಿ. 15: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 45ನೇ ದಿನದ ಪ್ರತಿಭಟನೆ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಯ ನೂರಾರು ಜನರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ಬೆಳ್ಳೂರು, ಹರಿಹರ ಗ್ರಾಮದ ಮುಕ್ಕಾಟಿರ ಕುಟುಂಬಸ್ಥರು, ಪೊನ್ನಂಪೇಟೆ ಸಮೀಪ ಹಳ್ಳಿಗಟ್ಟು ಬದರ್ ಜುಮಾ ಮಸೀದಿ, ಪೊನ್ನಂಪೇಟೆಯ ಶಾಫಿ ಜುಮಾ ಮಸೀದಿ, ಕಾಟ್ರಕೊಲ್ಲಿಯ ಮೊಹಿದ್ದೀನ್ ಜುಮಾ ಮಸೀದಿ, ಪೊನ್ನಂಪೇಟೆಯ ಹನಾಫಿ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನಾ ಸತ್ಯಾಗ್ರಹಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ಪೊನ್ನಂಪೇಟೆಯ ಶ್ರೀರಾಮಕೃಷ್ಣ ಆಶ್ರಮದಿಂದ ಸಂಘಟನೆಯ ವತಿಯಿಂದ ಬ್ಯಾನರ್‍ನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಸಂಖ್ಯೆಯ ಪದಾಧಿಕಾರಿಗಳು ಮತ್ತು ಸದಸ್ಯರು ಘೋಷಣೆಗಳನ್ನು ಕೂಗುತ್ತಾ ತಾಲೂಕು ರಚನೆಗಾಗಿ ಗಾಂಧಿ ಪ್ರತಿಮೆ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭ ಪೊನ್ನಂಪೇಟೆ ಪಟ್ಟಣದಲ್ಲಿ ವ್ಯಾಪಾರ ನಡೆಸುತ್ತಿರುವ ಮುಸ್ಲಿಂ ಸಮಾಜದವರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಾಂಧಿ ಪ್ರತಿಮೆ ಎದುರು ಬೃಹತ್ ಮಾನವ ಸರಪಳಿ ರಚನೆ ಮಾಡಿ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಆಶ್ರಮದಿಂದ ಸಂಘಟನೆಯ ವತಿಯಿಂದ ಬ್ಯಾನರ್‍ನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಸಂಖ್ಯೆಯ ಪದಾಧಿಕಾರಿಗಳು ಮತ್ತು ಸದಸ್ಯರು ಘೋಷಣೆಗಳನ್ನು ಕೂಗುತ್ತಾ ತಾಲೂಕು ರಚನೆಗಾಗಿ ಗಾಂಧಿ ಪ್ರತಿಮೆ ಎದುರು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿದರು.
ಈ ಸಂದರ್ಭ ಪೊನ್ನಂಪೇಟೆ ಪಟ್ಟಣದಲ್ಲಿ ವ್ಯಾಪಾರ ನಡೆಸುತ್ತಿರುವ ಮುಸ್ಲಿಂ ಸಮಾಜದವರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಾಂಧಿ ಪ್ರತಿಮೆ ಎದುರು ಬೃಹತ್ ಮಾನವ ಸರಪಳಿ ರಚನೆ ಮಾಡಿ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ
ಮೊಹಿದ್ದೀನ್ ಜುಮಾ ಮಸೀದಿಯ ಅದ್ಯಕ್ಷ ಎಂ.ಎ ಆಲಿ, ಕಾರ್ಯದರ್ಶಿ ಆಲೀರ ಅಬ್ದುಲ್ಲಾ, ಮಾಜಿ ಅಧ್ಯಕ್ಷ ಹುಸೈನ್, ಗ್ರಾ.ಪಂ. ಉಪಾಧ್ಯಕ್ಷ ಅಜೀಜ್ ಎ.ಎ, ಪೊನ್ನಂಪೇಟೆ ಹನಾಫಿ ಜಮೀಯಾ ಮಸೀದಿಯ ಅಧ್ಯಕ್ಷ ಮೊಹಿಸಿನ್, ಕಾರ್ಯದರ್ಶಿ ಎಂ.ಜಿ ಫಿರ್, ಪದಾಧಿಕಾರಿಗಳಾದ ಆತಾವುಲ್ಲಾ, ಅಬ್ದುಲ್ ಮನ್ನನ್, ಸಲೀಂ, ಸಾಧಿಕ್, ಹರಿಹರ-ಬೆಳ್ಳೂರು ಮುಕ್ಕಾಟಿರ ಕುಟುಂಬಸ್ಥರ ಪರವಾಗಿ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಉತ್ತಯ್ಯ, ಹಿರಿಯರಾದ ಶಂಭು ಕಾರ್ಯಪ್ಪ, ಮಾದಪ್ಪ, ಗಣೇಶ್, ನವೀನ್ ಅಯ್ಯಪ್ಪ, ರಾಜ ಮಂದಣ್ಣ, ರೋಹಿತ್, ಪ್ರವೀಣ್ ಭೀಮಯ್ಯ, ಸಂದೀಪ್, ಶುಭಾ, ಲಕ್ಷ್ಮಣ, ದೇವಿಕಾ ಕಾವೇರಮ್ಮ, ಜ್ಯೋತಿ ನವೀನ್, ಸ್ವಪ್ನ ರಾಜಾ, ಭಾರತಿ, ಜಾಗೃತಿ ರಮೇಶ್ ಹಾಗೂ ಇತರ ಪ್ರಮುಖರು ಪಾಲ್ಗೊಂಡಿದ್ದರು.
ತಾ. 19ಕ್ಕೆ ಬೆಂಬಲ: ಸಿ.ಪಿ.ಎಂ ಪಕ್ಷದಿಂದ ಪೊನ್ನಂಪೇಟೆ ತಾಲೂಕು ಹೋರಾಟಕ್ಕೆ ಬೆಂಬಲ ನೀಡಿ ತಾ. 19 ರ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವದಾಗಿ ಪಕ್ಷದ ಮುಖಂಡರಾದ ದುರ್ಗಾ ಪ್ರಸಾದ್ ತಿಳಿಸಿದ್ದಾರೆ.