ಮೂರ್ನಾಡು, ಡಿ. 15 : ಜಾನಪದ ಪರಿಷತ್ತು ಹೋಬಳಿ ಘಟಕ ಮೂರ್ನಾಡು ಹಾಗೂ ಮೂರ್ನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ಜಾನಪದ ವೈಭವ ಕಾರ್ಯಕ್ರಮ ನಡೆಯಿತು.

ವಿದ್ಯಾಸಂಸ್ಥೆ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಮಡಿಕೇರಿ ವ್ಯಾಂಡಮ್ ಎಂಟರ್ ಪ್ರೈಸಸ್ ಮಾಲೀಕ ದಾಮೋದರ್ ಉದ್ಘಾಟಿಸಿ ಜಾನಪದ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಜಾನಪದ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಮುನೀರ್ ಅಹ್ಮದ್ ಆಗಮಿಸಿ ಮಾತನಾಡಿ ಜಾನಪದ ಸೊಗಡು ವಿಶೇಷ ವಾದುದ್ದು, ವೈಭವಯುತ ವಾದುದ್ದಾಗಿದೆ. ಸುಂದರ ಬದುಕಿನ ಚಿತ್ರಣ, ಶ್ರೀಸಾಮಾನ್ಯರ ಅನುಭವ ಜಾನಪದವಾಗಿದೆ ಎಂದರು.

ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಅಧ್ಯಕ್ಷತೆ ವಹಿಸಿದರು. ಹೋಬಳಿ ಜಾನಪದ ಪರಿಷತ್ತು ಅಧ್ಯಕ್ಷ ಎಸ್.ಡಿ. ಪ್ರಶಾಂತ್, ಕಾರ್ಯದರ್ಶಿ ಹರೀಶ್ ಕಿಗ್ಗಾಲು, ಗಿರೀಶ್ ಕಿಗ್ಗಾಲು, ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ, ನಿರ್ದೇಶಕರಾದ ನಂದೇಟಿರ ರಾಜ ಮಾದಪ್ಪ, ಈರಮಂಡ ಸೋಮಯ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡ ಬಲಮುರಿಯ ಪಾಲಂದಿರ ಮಂದಣ್ಣ ಅವರನ್ನು ಸನ್ಮಾನಿಸಲಾಯಿತು.

ಜಾನಪದ ವೈಭವ ಕಾರ್ಯಕ್ರಮದಲ್ಲಿ ಮೂರ್ನಾಡು ಹೋಬಳಿ ಮಟ್ಟದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ, 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು. ಜಾನಪದ ನೃತ್ಯದಲ್ಲಿ ಮಾರುತಿ ವಿದ್ಯಾಸಂಸ್ಥೆ ಪ್ರಥಮ, ವಾಟೆಕಾಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ದ್ವಿತೀಯ, ಬಲಮುರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದುಕೊಂಡರು.

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಯಲ್ಲಿ ಪಿ.ಜಿ. ಸುನೈರ್(ಪ್ರ), ಎಲ್.ಆರ್. ಮನು(ದ್ವಿ), ಬಿ.ಪಿ. ಚೇತನ್(ತೃ) ಬಹುಮಾನ ಪಡೆದುಕೊಂಡರು. ಛದ್ಮವೇಷ ಸ್ಪರ್ಧೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ್, ಓಜಸ್, ತಷ್ಮಿ, ಕೌಶಿಕ್, ಅನಿರುದ್ದ್, ಪ್ರಣಯ್, ರನ್ಯ, ಭವಾನಿ, ಜ್ಞಾನವಿ, ಪ್ರಾರ್ಥನ, ಲೆಹರ್, ಮಾನ್ಯ, ದೇಚಮ್ಮ, ನಜಾ, ತಲಾಬ್, ದೇಚಕ್ಕ, ಸಂಜನ, ಬಬಿನ್, ಪ್ರಜ್ಞಾ, ಕವನ್, ಸುಮನ್, ಆಕಾಶ್, ಗೌತಮ್, ಸೋಮಯ್ಯ, ಶಶಿ, ಹರೀಶ್, ನವೀನ್, ನಿತಿನ್ ಕುಶಾಲಪ್ಪ ಹಾಗೂ ಪವಿತ್ರ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡರು. ಡಿ.ಎಲ್. ಪುಷ್ಪವೇಣಿ, ಕಲ್ಪನಾ, ಅರ್ಪಿತ ಛದ್ಮವೇಷ ಸ್ಪರ್ಧೆ ಹಾಗೂ ಮಮತ, ಜಲಜ ನಾಗರಾಜ್, ಕುಮುದ ಜಾನಪದ ನೃತ್ಯದ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.