ನಾಪೆÇೀಕ್ಲು, ಡಿ. 15: ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮವಿದ್ದರೆ ಸಾಧನೆ ಸುಲಭ ಎಂದು ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಅಭಿಮನ್ಯು ಅಕಾಡೆಮಿ ಸ್ಥಾಪಕ ತೀತಮಾಡ ಅರ್ಜುನ್ ದೇವಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸ್ಥಳೀಯ ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿಚಾರಗಳು ಮತ್ತು ತತ್ವಗಳಿಂದ ಜನರ ಜೀವನ ಬದಲಿಸಲು ಸಾಧ್ಯವಿಲ್ಲ. ವಿಚಾರಗಳು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದರು.
ಎಲ್ಲಾ ಮಕ್ಕಳಲ್ಲಿಯೂ ಅದ್ಭುತವಾದ ಪ್ರತಿಭೆಗಳಿರುತ್ತದೆ. ಅವಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಪೆÇೀಷಕರು ಮಾಡಬೇಕು ಎಂದು ಸಲಹೆ ನೀಡಿದರು. ಮಕ್ಕಳಲ್ಲಿ ಅದ್ಭುತವಾದ ಶಕ್ತಿಯಿದೆ. ಸೂಜಿಯ ಹಿಂದೆ ದಾರವಿರುವಂತೆ ಪೆÇೀಷಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸುವ ಅಗತ್ಯವಿದೆ. ಮಕ್ಕಳ ಬಗ್ಗೆ ಶಿಕ್ಷಕರಿಗಿಂತಲೂ ಹೆಚ್ಚಿನ ಕಾಳಜಿ ಪೆÇೀಷಕರಿಗಿರಬೇಕು. ಮಗು ಉತ್ತಮ ಪ್ರದರ್ಶನ ನೀಡಿದರೆ ಕುಟುಂಬದಲ್ಲಿ ಸಂತಸ ಮೂಡುತ್ತದೆ. ಪೆÇೀಷಕರು ಮಗುವಿನ ಉತ್ತಮ ಪ್ರದರ್ಶನಕ್ಕೆ ವೇದಿಕೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೆÇ್ರ. ಪೂಣಚ್ಚ, ಕಲಿಕೆಯಲ್ಲಿ ಸ್ಥಿರತೆ, ಕಾಳಜಿ, ಏಕಾಗ್ರತೆ ಮುಖ್ಯ. ವಿದ್ಯಾರ್ಥಿಗಳು ನಿದ್ದೆ ಕಡಿಮೆ ಮಾಡಬೇಕು. ಮಿತ ಆಹಾರ ಸೇವಿಸಬೇಕು. ಇದು ಕಲಿಕೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ ಮಾತನಾಡಿ, ತಮ್ಮ ಸಂಸ್ಥೆಯ ಏಳಿಗೆಗೆ ಮಾಜಿ ಆಡಳಿತ ಮಂಡಳಿ ಅಧ್ಯಕ್ಷರು, ನಿವೃತ್ತ ಪ್ರಾಂಶುಪಾಲರು, ನಿರ್ದೇಶಕರ, ನುರಿತ ಶಿಕ್ಷಕರ ಪ್ರಾಮಾಣಿಕ ಸೇವೆಯೇ ಕಾರಣವಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಲು ಸರಕಾರದಿಂದ ಅನುಮತಿ ದೊರೆತಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಮಾಜಿ ಅಧ್ಯಕ್ಷ ಬಿದ್ದಾಟಂಡ ಪೆÇ್ರ. ಪೆÇನ್ನಪ್ಪ, ಕಾರ್ಯದರ್ಶಿ ಬಿದ್ದಾಟಂಡ ಪಾಪ ಮುದ್ದಯ್ಯ, ನಿರ್ದೇಶಕ ರಾದ ಬಿದ್ದಾಟಂಡ ಬಿ. ಬೆಳ್ಯಪ್ಪ, ಕೊಂಬಂಡ ಗಣೇಶ್, ಬೊಪ್ಪಂಡ ಕುಶಾಲಪ್ಪ, ಅರೆಯಡ ಸೋಮಪ್ಪ, ನೆರವಂಡ ಸುನಿಲ್ ದೇವಯ್ಯ, ನಾಯಕಂಡ ದೀಪು ಚಂಗಪ್ಪ, ಪ್ರಾಂಶುಪಾಲೆ ಬಿ.ಎಂ. ಶಾರದ, ಬೊಳಕಾರಂಡ ಪೆಮ್ಮಯ್ಯ, ರಮೇಶ್ ಕಾರ್ಯಪ್ಪÀ ಇದ್ದರು.
ಕಾರ್ಯಕ್ರಮದ ನೇತೃತ್ವವನ್ನು ಹಿರಿಯ ಶಿಕ್ಷಕಿಯರಾದ ಮುಂಡಂಡ ಕವಿತಾ, ಸುಬ್ಬಮ್ಮ, ಕೆ.ಡಿ. ಶೋಬಿತಾ, ರಶ್ಮಿ ಹಾಗೂ ಶಿಕ್ಷಕ ವೃಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಳೆದ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕ್ರೀಡಾ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.