ಸುಂಟಿಕೊಪ್ಪ, ಡಿ. 15: ಜಿಲ್ಲಾ ಪಂಚಾಯಿತಿ ಹಾಗೂ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರ ವಿದ್ಯಾ ಸಾಗರ ಕಲಾವೇದಿಕೆಯ ತಂಡದಿಂದ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸುಂಟಿಕೊಪ್ಪ ಪಟ್ಟಣದಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವೇದಿಕೆ ಮುಂಭಾಗದ ರಸ್ತೆಯಲ್ಲಿ ಬೀದಿ ನಾಟಕವನ್ನು ಆಯೋಜಿಸುವ ಮೂಲಕ ಇಂದಿನ ದಿನಗಳಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ತಮ್ಮ ಸುತ್ತಮುತ್ತಲಿನ ಪರಿಸರ ಆಸ್ವಚ್ಛತೆಯಿಂದ ಕೂಡಿರುವದೇ ಕಾರಣವಾಗಿದೆ. ಪರಿಸವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಹಲವು ರೋಗರುಜಿನಗಳನ್ನು ತಡೆಗಟ್ಟಬಹುದು ಎಂಬದಾಗಿ ನಾಟಕದ ಮೂಲಕ ಪ್ರದರ್ಶಿಸಲಾಯಿತು.

ಕಾರ್ಯಕ್ರಮಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಾಗರತ್ನ ಸುರೇಶ್, ರತ್ನಾ ಜಯನ್, ಸಿ. ಚಂದ್ರ ಪಂಚಾಯಿತಿ ಸಿಬ್ಬಂದಿ ಗಳಾದ ಪುನೀತ್, ಶ್ರೀನಿವಾಸ್, ಮಂದಣ್ಣ, ಕಲಾವಿದರುಗಳಾದ ಗೌರಮ್ಮ, ನೀಲಮ್ಮ, ರವಿ, ಚಂದ್ರಪ್ಪ ಶಿವಕುಮಾರ್, ಬೀದಿ ನಾಟಕವನ್ನು ನಡೆಸಿದರು.