ಮಡಿಕೇರಿ, ಡಿ. 16: ಅಪಘಾತವನ್ನು ತಪ್ಪಿಸುವ ಧಾವಂತದಲ್ಲಿ ಕಾರೊಂದು ಬೇತ್ರಿ ಸೇತುವೆ ಬಳಿ ನದಿಗುರುಳಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿ ಭಾರೀ ಅನಾಹುತ ತಪ್ಪಿದೆ.

ಬೆಂಗಳೂರಿನಿಂದ ಬಾಡಿಗೆಗೆ ಗೊತ್ತುಪಡಿಸಿ ನಾಲ್ವರು ಸ್ನೇಹಿತರು ವಾರದ ಕೊನೆಯ ದಿನಗಳನ್ನು ಕಳೆಯಲು ಕೊಡಗಿಗೆ ಧಾವಿಸಿದ್ದು, ರಕ್ಷಿತ್ ಅವರು ಚಲಾಯಿಸುತ್ತಿದ್ದ ಕಾರು ಮಡಿಕೇರಿಯಿಂದ ನಾಗರಹೊಳೆ ಕಡೆಗೆ ತೆರಳುತ್ತಿದ್ದಾಗ ಮೂರ್ನಾಡು ಸಮೀಪದ ಬೇತ್ರಿ ಸೇತುವೆ ಮೇಲೆ ವೀರಾಜಪೇಟೆ ಕಡೆಯಿಂದ ಬರುತ್ತಿದ್ದ ಕಾರೊಂದನ್ನು ಅದರ ಹಿಂದಿದ್ದ ಟೆಂಪೋ ಹಿಂದಿಕ್ಕುವ ಧಾವಂತದಲ್ಲಿ ಅಪಾಯವನ್ನು ತಪ್ಪಿಸುವ ಸಲುವಾಗಿ ಬದಿಗೆ ತೆಗೆದುಕೊಂಡು ಪ್ರವಾಸಿ ಕಾರು ನಿಯಂತ್ರಣ ತಪ್ಪಿ ನದಿಗುರುಳಿದೆ. ಕಾರಿನ ಚಾಲಕ ರಕ್ಷಿತ್ ಹಾಗೂ ಸ್ನೇಹಿತೆ ಶರಣ್ಯ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಉಳಿದಿಬ್ಬರು ಯಾವದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕಾರನ್ನು ರಾತ್ರಿ ನದಿಯಿಂದ ಮೇಲೆತ್ತಲಾಯಿತು.