ನಾಪೆÇೀಕ್ಲು, ಡಿ. 16: ಪಾರಾಣೆ ಕೋಣಂಜಗೇರಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಿರುಂದಾಡು ಗ್ರಾಮದ ಶ್ರೀ ಭಗವತಿ ದೇವಳ ರಸ್ತೆ ಕಾಮಗಾರಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೋಚಮಂಡ ವನಿತಾ ತಮ್ಮಯ್ಯ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಮುಖ್ಯ ಮಂತ್ರಿಗಳ ವಿಶೇಷ ಪ್ಯಾಕೇಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಪ್ರಯತ್ನದಿಂದ ಈ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂ. ಗಳಿಗಿಂತಲೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್ ಮಾತನಾಡಿ ಅಭಿವೃದ್ಧಿಯೇ ನಮ್ಮ ಗುರಿ. ಬಿಜೆಪಿ ಶಾಸಕರು ನಾವು ಜಿಲ್ಲೆಗೆ 1800 ಕೋಟಿ ಅನುದಾನ ತಂದಿದ್ದೇವೆ ಎಂದು ಹೇಳಿಕೆ ನೀಡುತ್ತಾರೆ. ನಮ್ಮ ಸರಕಾರದ್ದು ಜಿಲ್ಲೆಗೆ ಒಂದು ಸಾವಿರ ಕೋಟಿ ರೂ.ಗಳ ಅನುದಾನ ಮಾತ್ರ. ಆದರೆ ಈ ಹಣದಲ್ಲಿ ಅವರಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡಿದ್ದೇವೆ ಎಂದರು.
ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ ಜಿಲ್ಲೆಯ ವನಾಗಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿ ಯಿಂದ ಉಸ್ತುವಾರಿ ಸಚಿವರೊಂದಿಗೆ ಸೇರಿ ಈಗಾಗಲೇ 200 ಕೋಟಿ ರೂ. ಗಳನ್ನು ಅಭಿವೃದ್ಧಿಗೆ ಮಂಜೂರು ಮಾಡಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಮತದಾರರು ಅಭಿವೃದ್ಧಿಗೆ ಶ್ರಮಿಸುವವರನ್ನು ಬೆಂಬಲಿಸಬೇಕು ಎಂದರು.
ಗ್ರಾಮದ ಹಿರಿಯರಾದ ಬಾದುಮಂಡ ಮುತ್ತಪ್ಪ ಮಾತನಾಡಿ ನಮ್ಮ ಗ್ರಾಮ ಹೆಚ್ಚಿನ ಏರು ತಗ್ಗುಗಳಿಂದ ಕೂಡಿದ್ದು, ಜನ ಸಂಚಾರ, ವಾಹನ ಸಂಚಾರ ದುಸ್ತರವಾಗಿದೆ. ಇದನ್ನು ಮನಗಂಡು ನಮ್ಮ ಗ್ರಾಮದವರೇ ಆದ ಕದ್ದಣಿಯಂಡ ಹರೀಶ್ ಬೋಪಣ್ಣ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಹಣ ಮಂಜೂರು ಮಾಡಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿರುವದು ಸಂತಸ ತಂದಿದೆ ಎಂದರು.
ಈ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ವಲಯ ಕಾಂಗ್ರೆಸ್ ಅಧ್ಯಕ್ಷ ದಿಲೀಪ್, ಭೂ ಮಂಡಳಿ ಸದಸ್ಯ ಬೊಳ್ಳಂಡ ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ನಾಯಕಂಡ ಮುತ್ತಪ್ಪ, ಬಲ್ಯಾಟಂಡ ಕೌಶಿ ಕುಟ್ಟಯ್ಯ, ಚೊಟ್ಟೇಯಂಡ ಸ್ವಾತಿ, ಮಲೆಯರ ಸ್ವಾತಿ, ಭಗವತಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚೆರುಮಂದಂಡ ಸುರೇಶ್, ಪಳಂಗಂಡ ಶಂಬು ಸುಬ್ಬಯ್ಯ, ನಾಳಿಯಂಡ ಸುಬ್ಬಯ್ಯ, ದೇವಜನ ಗೋಪಾಲ, ಮುಕ್ಕಾಟಿರ ಪುಟ್ಟ, ಪಳಂಗಂಡ, ರೋಶನ್, ಗುಲ್ಸನ್, ಪಾಲು ಸೋಮಣ್ಣ, ಗ್ರಾಮಸ್ಥರು ಇದ್ದರು.