ಮಡಿಕೇರಿ, ಡಿ. 16 : ಹೆಚ್.ಡಿ. ಕುಮಾರಸ್ವಾಮಿ ಅವರ 59ನೇ ಜನ್ಮದಿನವನ್ನು ಜೆಡಿಎಸ್‍ನ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿತು.

ನಗರದ ಶ್ರೀ ಶಕ್ತಿ ವೃದ್ಧಾಶ್ರಮದ ಸಂಧ್ಯಾ ಕಾಲದ ಬಂಧುಗಳಿಗೆ ಜೆಡಿಎಸ್ ಪ್ರಮುಖರು ಹಣ್ಣು ಹಂಪಲು ಹಾಗೂ ವಸ್ತ್ರ ವಿತರಣೆ ಮಾಡಿ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಎಂ. ಷರೀಫ್, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್, ನಗರಸಭಾ ಸದಸೆÀ್ಯ ಲೀಲಾಶೇಷಮ್ಮ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ವೀರಾಜಪೇಟೆ: ರಾಜ್ಯದಲ್ಲಿ ರೈತರು, ಕಡು ಬಡವರ ಮೇಲೂ ಕಾಳಜಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯ ಮಂತ್ರಿಯಾಗುವದು ಖಚಿತ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ 59ನೇ ಹುಟ್ಟು ಹಬ್ಬದ ಪ್ರಯುಕ್ತ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಸಂಕೇತ್ ಪೂವಯ್ಯ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿರುವ ಮತದಾರರು ಈಗ ಪ್ರಾದೇಶಿಕ ಪಕ್ಷದ ಬಗ್ಗೆ ಒಲವು ತೋರುತ್ತಿರುವದರಿಂದ ಜೆ.ಡಿ.ಎಸ್. ಮುಂದಿನ ಚುನಾವಣೆಯ ನಂತರ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಎಚ್. ಮತೀನ್, ನಗರ ಸಮಿತಿಯ ಅಧ್ಯಕ್ಷ ಪಿ.ಎ. ಮಂಜುನಾಥ್ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಸಂದರ್ಭದಲ್ಲಿ ಕ್ಷೇತ್ರದ ಉಪಾಧ್ಯಕ್ಷ ಬಾಳೆಕುಟ್ಟೀರ ದಿನಿ ಬೋಪಯ್ಯ, ಪಂದಿಯಂಡ ರವಿ ಮೇದಪ್ಪ, ಇಟ್ಟೀರ ಸಂಪತ್, ಮಾತಂಡ ಚಂಗಪ್ಪ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಆರ್.ಎ.ಸಕ್ಲೇನ್, ಮಾತಂಡ ಚಂಗಪ್ಪ, ನಗರ ಸಮಿತಿಯ ಅಧ್ಯಕ್ಷ ಪಿ.ಎ.ಮಂಜುನಾಥ್, ಹಕೀಬ್, ಅಶ್ರಫ್ ಆಲಿ, ರಂಜನ್ ನಾಯ್ಡು, ಮುಖಂಡರಾದ ಸಿ.ಎ.ನಾಸರ್ ಇತರ ಕಾರ್ಯಕರ್ತರುಗಳು ಹಾಜರಿದ್ದರು.

ನಾಪೆÇೀಕ್ಲು : ಮಾಜಿ ಮುಖ್ಯ ಮಂತ್ರಿ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರ ಸ್ವಾಮಿಯವರ 59 ನೇ ಹುಟ್ಟು ಹಬ್ಬದ ಪ್ರಯುಕ್ತ ನಾಪೆÇೀಕ್ಲು ಜೆ.ಡಿ.ಎಸ್. ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಸಿಹಿಯನ್ನು ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭ ಜೆ.ಡಿ.ಎಸ್. ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ಹಿರಿಯ ಜೆ.ಡಿ.ಎಸ್. ಮುಖಂಡ ಬೋಪ್ಪೆರ ಕಾವೇರಪ್ಪ, ಜಿಲ್ಲಾ ಅಲ್ಪ ಸಂಖ್ಯಾಂತ ಘಟಕದ ಕಾರ್ಯದರ್ಶಿ ಬಿ.ಎ. ಸುಲೈಮಾನ್, ಗ್ರಾಮ ಪಂಚಾಯತ್ ಸದಸ್ಯ ಪಿ.ಎಂ. ರಷೀದ್, ಕಾರ್ಯಕರ್ತರಾದ ಗುತ್ತಿಮುಂಡನ ಪದÀ್ಮರಾಜ್, ಜಾಫರ್, ರಾಜೇಂದ್ರ, ನಾಗರಾಜ, ಮಜೀದ್, ನಯಾಜ್, ಅಬುಬಕರ್, ಎಂ.ಎಸ್. ಇಬ್ರಾಹಿಂ, ಮಂಜು, ಆರೋಗ್ಯ ಇಲಾಖೆಯ ಮಧುಸೂದನ್, ಸಿಬ್ಬಂದಿ ವರ್ಗದವರು ಇದ್ದರು.