ಸೋಮವಾರಪೇಟೆ,ಡಿ.17: ಕಾಫಿ ತೋಟದಿಂದ ಸುಮಾರು 80 ಸಾವಿರ ಮೌಲ್ಯದ ಕಾಫಿಯನ್ನು ಕಳವು ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಮೀಪದ ದೊಡ್ಡಹಣಕೋಡು ಗ್ರಾಮ ನಿವಾಸಿ ಹೆಚ್.ಕೆ. ಪಾರ್ವತಿ ಎಂಬವರಿಗೆ ಸೇರಿದ ತೋಟಕ್ಕೆ ಮರಗೋಡು ನಿವಾಸಿಗಳಾದ ಭಾರ್ಗವ ಮತ್ತು ಜೀವರತ್ನ ಅವರುಗಳು ಕೆಲಸಗಾರರೊಂದಿಗೆ ಆಗಮಿಸಿ, ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು 80 ಸಾವಿರ ಮೌಲ್ಯದ ಕಾಫಿಯನ್ನು ಕುಯ್ದು ಕಳವು ಮಾಡಿರುವದಾಗಿ ಪಾರ್ವತಿ ದೂರು ನೀಡಿದ್ದಾರೆ.

ಇದರೊಂದಿಗೆ ಪಾರ್ವತಿ ಅವರ ಮನೆಯ ಹಿಂಭಾಗವಿದ್ದ ಸಣ್ಣ ಮನೆಗೆ ಬೆಂಕಿ ಹಚ್ಚಿರುವದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.