ಶ್ರೀಮಂಗಲ, ಡಿ. 17: ತಾ. 24, 25 ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆಯುವ ಯುಕೊ ಆಶ್ರಯದ ಕೊಡವ ಮಂದ್ ನಮ್ಮೆ ಕಾರ್ಯಕ್ರಮದ ಯಶಸ್ವಿಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ಕೊಡವ ವಿದ್ಯಾರ್ಥಿ ಸಂಘದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ನಿಯರು ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದು, ಕೊಡವ ಸಂಸ್ಕøತಿಯ ಬೆಳವಣಿಗೆಗೆ ಸೇವೆ ಸಲ್ಲಿಸಲು ಹೆಮ್ಮೆಯ ವಿಚಾರವೆಂದು ಕಾವೇರಿ ಕಾಲೇಜು ಕೊಡವ ವಿದ್ಯಾರ್ಥಿ ಸಂಘದ ಪ್ರಮುಖರಾದ ನೆಲ್ಲಮಕ್ಕಡ ವಿಘ್ನೇಶ್ ಅಭಿಪ್ರಾಯ ಪಟ್ಟರು.
ಕಾವೇರಿ ಕಾಲೇಜಿನಲ್ಲಿ ಹಮ್ಮಿ ಕೊಂಡಿದ್ದ ಮಂದ್ ನಮ್ಮೆಯ ಸಂಘಟನಾ ಅಭಿಯಾನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತ ನಾಡಿದರು. ಈ ಸಂದರ್ಭ ಮಾತನಾಡಿದ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಕೊಡಗಿನ ನೆಲವನ್ನು ನಾವು ಉಳಿಸಿಕೊಳ್ಳಬೇಕಾದ ಅನಿವಾ ರ್ಯತೆ ಇದೆ ಎಂದು ಹೇಳಿದರು. ಒಂದು ಸಂಸ್ಕøತಿ ಎಂಬದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಈ ಪ್ರಪಂಚ ದಲ್ಲಿರುವ ಪ್ರತಿ ವ್ಯಕ್ತಿಯು ಸಹ ಒಂದಲ್ಲ ಒಂದು ಸಂಸ್ಕøತಿಯ ಪ್ರಭಾವಕ್ಕೆ ಒಳಪಟ್ಟಿರಲೇಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ವಿದ್ಯಾರ್ಥಿ ಸಂಘದ ಕೇಳಪಂಡ ಕ್ಷೀರಾಗ್, ತೀತಿರ ಮಂಜುಶ್ರಿ, ಅಜ್ಜಿಕುಟ್ಟಿರ ಪೂವಮ್ಮ ಅವರು ಕೊಡವ ವಿದ್ಯಾರ್ಥಿ ಸಂಘದ ಪರವಾಗಿ ಮಾತನಾಡಿ ಕಾವೇರಿ ಕಾಲೇಜಿನ ಕೊಡವ ವಿದ್ಯಾರ್ಥಿ ಸಂಘದ 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಯುಕೊ ಕೊಡವ ಮಂದ್ ನಮ್ಮೆಯಲ್ಲಿ ತಮ್ಮನ್ನು ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುವದಲ್ಲದೆ ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಬಂದು ಮಿತ್ರರ ಜೊತೆಗೆ ಸಾಂಪ್ರದಾಯಿಕ ಉಡುಪಿನಲ್ಲಿ 2 ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದಾಗಿ ಘೋಷಿಸಿದರು.
ಈ ಸಂದರ್ಭ ಯುಕೊ ಸಂಘಟನೆಯ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಉಳುವಂಗಡ ಲೋಹಿತ್ ಭೀಮಯ್ಯ, ಗುಡಿಯಂಗಡ ಲಿಖಿನ್ ಬೋಪಣ್ಣ, ಮಲ್ಲಮಾಡ ದೇವಯ್ಯ, ಪುಟ್ಟಂಗಡ ಉತ್ತಪ್ಪ, ಮತ್ತಿತರರು ಹಾಜರಿದ್ದರು.