ನಾಪೆÇೀಕ್ಲು, ಡಿ. 17: ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಪ್ರವಾಸಿಗರು ಅಡುಗೆ ಮಾಡುವದನ್ನು ನಿಷೇಧಿಸಬೇಕೆಂದು ಜಿಲ್ಲಾ ಮಾನವ ಹಕ್ಕು ಆಯೋಗದ ಅಧ್ಯಕ್ಷ ಹಾಗೂ ಮಡಿಕೇರಿ ತಾಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಸಂಗಮದ ಬಳಿ ಪ್ರವಾಸಿಗರು ಅಡುಗೆ ತಯಾರಿಸಿ, ಊಟ ಮಾಡುವದರಿಂದ ಸ್ಥಳದಲ್ಲಿ ಅಶುಚಿತ್ವತೆ ಉಂಟಾಗುವದರ ಮೂಲಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಬರಲಿದೆ. ಇದಕ್ಕೆ ಜಿಲ್ಲಾಡಳಿತ, ಭಾಗಮಂಡಲ ಗ್ರಾಮ ಪಂಚಾಯಿತಿ ಮತ್ತು ಭಗಂಡೇಶ್ವರ ದೇವಳದ ಆಡಳಿತಾಧಿಕಾರಿ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು. ಅಡುಗೆ ತಯಾರಿಸಲು ಪ್ರವಾಸಿಗರಿಗೆ ಸೂಕ್ತ ಜಾಗ ಮತ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.