ಕುಶಾಲನಗರ, ಡಿ 17: ಪ್ರತಿಯೊಬ್ಬರೂ ಭಗವಂತನ ಆರಾಧನೆ ಮಾಡುವ ಮೂಲಕ ಚೈತನ್ಯಪೂರ್ಣ ಪ್ರೇರಣೆ ಪಡೆಯಬಹುದು ಎಂದು ಶಕ್ತಿ ದಿನಪತ್ರಿಕೆ ಸಹಾಯಕ ಸಂಪಾದಕ ಚಿ.ನಾ.ಸೋಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ತೊರೆನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಅಂಗವಾಗಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧಾರ್ಮಿಕ ಚಟುವಟಿಕೆಗಳ ಮೂಲಕ ಉತ್ತಮ ಜೀವನ ಸಾಗಿಸಲು ಸಾಧ್ಯ. ಭಕ್ತಿ ಮೂಲಕ ಸಂಸಾರಕ್ಕೆ ಒಳಿತು ಉಂಟಾಗುತ್ತದೆ. ಸತ್ಯ, ಭಕ್ತಿ, ಶ್ರದ್ಧೆ ಮೂಲಕ ಕಾರ್ಯಚಟುವಟಿಕೆ ನಡೆಸಿದಲ್ಲಿ ಯಶಸ್ಸು ಕಾಣಬಹುದು. ತಮ್ಮನ್ನು ತಾವೇ ಉದ್ಧರಿಸಿಕೊಳ್ಳುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಬದುಕು ರೂಪಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಶ್ಲಾಘಿಸಿದ ಅವರು, ಅವನತಿಯತ್ತ ಸಾಗುತ್ತಿರುವ ಸಮಾಜದ ಬದಲಾವಣೆಗೆ ಇಂತಹ ಯೋಜನೆಗಳು ಸಹಕಾರಿ ಎಂದರು. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಯೋಜನೆಯ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಭಗವಂತನ ಆರಾಧನೆಯಿಂದ ಚೈತನ್ಯ ಪೂರ್ಣ ಪ್ರೇರಣೆ
ಪೂಜಾ ವಿಧಿ ನೆರವೇರಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಯೋಜನೆಯ ಮೇಲ್ವಿಚಾರಕರಾದ ವಿನೋದ್, ರಮೇಶ್, ಪೂಜಾ ಸಮಿತಿ ಪದಾಧಿಕಾರಿಗಳು, ಪ್ರಗತಿಬಂಧು ಸ್ವಸಹಾಯ ಒಕ್ಕೂಟಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.