ಮಡಿಕೇರಿ, ಡಿ. 17: ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಲು ಜೆಡಿಎಸ್ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಜಿಲ್ಲಾ ಉಪಾಧ್ಯಕ್ಷರಾಗಿ ಕಲಿಯಂಡ ಸಿ. ನಾಣಯ್ಯ, ಎಸ್.ಎಚ್. ಮೈನುದ್ದೀನ್, ಎ.ವಿ. ಶಾಂತಕುಮಾರ್, ಬಲ್ಲಚಂಡ ಗೌತಮ್, ದಯಾ ಚಂಗಪ್ಪ, ಡಿ.ಪಿ. ಬೋಜಪ್ಪ, ಹೆಚ್.ಬಿ. ಜಯಮ್ಮ.

ಜಿಲ್ಲಾ ವಕ್ತಾರರಾಗಿ ಎಂ.ಎ. ಅದಿಲ್ ಪಾಷ, ಕಾಟ್ನಮನೆ ವಿಠಲ ಗೌಡ, ಎಂ.ಟಿ. ಕಾರ್ಯಪ್ಪ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾಗಿ ರಾಜೇಶ್ ಮುಳ್ಳುಸೋಗೆ, ಎಚ್.ಡಿ. ಚಂದ್ರಶೇಖರ್.

ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಎ.ಕೆ. ವೇದ್‍ಮೂರ್ತಿ (ಪಾಪಣ್ಣ), ಎ.ಜಿ. ವಿಜಯ್, ಗೋಪಾಲ್.

ಜಂಟಿ ಕಾರ್ಯದರ್ಶಿಗಳಾಗಿ ಕೊಳಂಬೆ ವಿನು, ಅಣ್ಣಯ್ಯ ಬಿ.ಡಿ., ಸಿ.ಎ. ನಾಸಿರ್, ಕೋಟಿ ರಾಮಣ್ಣ, ಜಯ, ಕಾಂತರಾಜ್ ಕೊಡ್ಲಿಪೇಟೆ, ಹೆಚ್.ಕೆ. ತ್ರಿಶೂಲ್.

ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿ ಹಂಸ (ನೆಲ್ಲಿಹುದಿಕೇರಿ).

ಕಾರ್ಯದರ್ಶಿಗಳಾಗಿ ಕರೀಂ, ಜಯಕುಮಾರ್ ಕೆ.ಎಂ., ಡೆನ್ನಿ ಭರತ್.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿ ಚಂದ್ರಶೇಖರ್, ಶುಂಠಿ ಶೇಖರ್, ಗಫೂರ್ ಕೆ.ಎಂ., ಮುತ್ತೇಗೌಡ ಮಾಸ್ಟರ್.

ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆ.ಎಸ್. ಚನ್ನಬಸಪ್ಪ.

ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಕುಂಬುಗೌಡನ ಜಗದೀಪ್.

ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾಗಿ ಪಾಣತ್ತಲೆ ಎನ್. ಅಮೃತ್ ಸೋಮಯ್ಯ.

ಜಿಲ್ಲಾ ಖಜಾಂಚಿಯಾಗಿ ಆರ್.ಡಿ. ಆನಂದ್.

ಪ್ರಧಾನ ಕಾರ್ಯದರ್ಶಿಯಾಗಿ ಪಾಣತ್ತಲೆ ವಿಶ್ವನಾಥ್.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಯಮುನ ಎಂ.ಎ. ಹಾಗೂ ಪಕ್ಷದ ಮುಖಂಡರಾದ ಹೊಸೂರು ಸತೀಶ್ ಜೋಯಪ್ಪ, ಎನ್.ಬಿ. ನಾಗಪ್ಪ, ಹೆಚ್.ಪಿ. ಶೇಷಾದ್ರಿ ಮತ್ತು ಎಂ.ಟಿ. ಕಾರ್ಯಪ್ಪ ಇವರುಗಳನ್ನು ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳದ ಪದಾಧಿಕಾರಿಗಳನ್ನಾಗಿ ನೇಮಿಸಲು ಜಿಲ್ಲಾ ಘಟಕದಿಂದ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.