ಸೋಮವಾರಪೇಟೆ, ಡಿ. 17: ಮಹಿಳೆಯರ ಸಬಲೀಕರಣವಾದಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಉತ್ತಮ ಹೆಜ್ಜೆಗಳನ್ನು ಇಡುತ್ತಿದ್ದು, ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತೀ ಮತದಾರರಿಗೆ ತಿಳಿಯಪಡಿಸಬೇಕು ಎಂದು ಐ.ಎನ್.ಟಿ.ಯೂ.ಸಿ. ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.ಸೋಮವಾರಪೇಟೆಯ ಅಡಿಯೂರಿನಲ್ಲಿ ನಡೆದ ಐ.ಎನ್.ಟಿ.ಯೂ.ಸಿ. ಮಹಿಳಾ ಘಟಕದ ‘ಬಲವರ್ಧನೆಗೆ ನಮ್ಮ ಹೆಜ್ಜೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರಕಾರ ಮಹಿಳಾ ಸಬಲೀಕರಣದತ್ತ ಹೆಚ್ಚು ಒತ್ತು ನೀಡಿದೆ ಎಂದರು. ಸಭೆಯಲ್ಲಿ ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸ್ಥಳೀಯ ನಾಯಕರು ಹಾಜರಿದ್ದರು.