ವೀರಾಜಪೇಟೆ, ಡಿ. 18: ಪ್ರಾಥಮಿಕ ಶಾಲಾ ಶಿಕ್ಷಣವು ದೇಶದ ಭದ್ರ ಬುನಾದಿಯಾಗಿದ್ದು ಅದನ್ನು ಬಲ ಪಡಿಸುವ ನಿಟ್ಟಿನಲ್ಲಿ ಮತ್ತು ಅದಕ್ಕಿರುವ ಎಡರು ತೊಡರುಗಳನ್ನು ನಿವಾರಿಸಲು ತಾ. 20 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುರೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ದಲ್ಲಿ ಶೈಕ್ಷಣಿಕ ವಿಚಾರಗೋಷ್ಠಿಯನ್ನು ಆಯೋಜಿಸ ಲಾಗಿದ್ದು ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಭಾಗವಹಿಸ ಲಿದ್ದಾರೆ.

ಈ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ವರ್ಗಾವಣೆಯ ಪ್ರಕ್ರಿಯೆ ಯಲ್ಲಿರುವ ತಾಂತ್ರಿಕ ಅಡಚಣೆಗಳ ಬಗ್ಗೆ ಮಾಹಿತಿ, ಕೊಡಗು ಜಿಲ್ಲಾ ನೌಕರರಿಗೆ ಗಿರಿಭತ್ಯೆ ವಿಸ್ತರಣೆಗೆ ಒತ್ತಾಯ, 6ನೇ ವೇತನ ಆಯೋಗ ಶೀಘ್ರ ಜಾರಿ, ಸರ್ಕಾರಿ ಶಾಲಾ ಬಲವರ್ಧನೆಗಿರುವ ಮಾರ್ಗೋಪಾ ಯಗಳು ಮುಂತಾದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಲಾಗುವದು ಎಂದರು.

ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎ.ವಿ. ಮಂಜುನಾಥ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ನಲಿಕಲಿ ಯೋಜನೆ ಯಿಂದ ಮಕ್ಕಳ ಹಾಜರಾತಿ ಕುಂಠಿತ ಗೊಳ್ಳುತ್ತಿದೆ.

ಆರ್‍ಟಿಇ ಪದ್ಧತಿಯಿಂದ ಸರ್ಕಾರಿ ಶಾಲೆಗಳಿಗೆ ತೊಂದರೆ ಯಾಗುತ್ತಿದೆ. ಆರ್‍ಟಿಇ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಹೇಳಿದರು.

ಮೈಸೂರು ವಲಯ ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿ ಜಾನಕಿ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ದೇಶದಲ್ಲಿಯೇ ಏಕರೂಪ ಶಿಕ್ಷಣ ನೀತಿ ಜಾರಿಗೆ ಬರಬೇಕು. ಎಲ್ಲಾ ಶಿಕ್ಷಕರಿಗೂ ಸಮಾನ ವೇತನ ಸಿಗು ವಂತಾಗಬೇಕು ಎಂದು ಹೇಳಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವರಾಜ್ ಮಾತನಾಡಿ, ತಾ. 20 ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್, ಪಶು ಸಂಗೋಪನಾ ಸಚಿವ ಎ. ಮಂಜು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ಮಾಜಿ ಶಾಸಕ ಬಿ.ಎ. ಜೀವಿಜಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಉಪಸ್ಥಿತರಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಎಸ್‍ಡಿಎಂಸಿ ತಾಲೂಕು ಅಧ್ಯಕ್ಷೆ ನ್ಯಾನ್ಸಿ ಅಂತೋಣಿ, ತಾಲೂಕು ಕಾರ್ಯದರ್ಶಿ ಕೆ.ವೈ. ಇಸ್ಮಾಯಿಲ್, ಅಕ್ಷರ ದಾಸೋಹದ ತಾಲೂಕು ಅಧ್ಯಕ್ಷ ಡಿ.ಎಂ. ಹಂಸ ಉಪಸ್ಥಿತರಿದ್ದರು.