ಗೋಣಿಕೊಪ್ಪ ವರದಿ, ಡಿ. 18 : ಕೂರ್ಗ್ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಗೋಣಿಕೊಪ್ಪ ಕಾಪ್ಸ್ ಶಾಲಾ ಮೈದಾನದಲ್ಲಿ ನಡೆದ ಅಂತರ್‍ಶಾಲಾ ಕ್ಲಬ್ ಮಹೇಂದ್ರ ಕ್ರಿಕೆಟ್ ಟೂರ್ನಿಯಲ್ಲಿ ಮಡಿಕೇರಿ ಕೊಡಗು ವಿದ್ಯಾಲಯ ತಂಡ ಚಾಂಪಿಯನ್, ಗೋಣಿಕೊಪ್ಪ ಲಯನ್ಸ್ ತಂಡವು ರನ್ನರ್ ಅಪ್ ಸ್ಥಾನ ಅಲಂಕರಿಸಿದೆ.

ಪದವಿಪೂರ್ವ ಕಾಲೇಜು ತಂಡಗಳ ನಡುವೆ ನಡೆದ ಅಂತರ್ ಪದವಿಪೂರ್ವ ಆಲಿ ಟ್ರಾವಲ್ಸ್ ಕಪ್‍ನ್ನು ಕಾಪ್ಸ್ ತಂಡ ಗೆದ್ದುಕೊಂಡಿದೆ. ದ್ವಿತೀಯ ತಂಡವಾಗಿ ವೀರಾಜಪೇಟೆ ಸೆಂಟ್ ಆನ್ಸ್ ತಂಡ ಹೊರಹೊಮ್ಮಿದೆ.

ಅಂತರ್‍ಶಾಲಾ ವಿಭಾಗದಲ್ಲಿ ಮಡಿಕೇರಿ ಕೊಡಗು ವಿದ್ಯಾಲಯ ತಂಡವು ಗೋಣಿಕೊಪ್ಪ ಲಯನ್ಸ್ ತಂಡವನ್ನು 112 ರನ್‍ಗಳಿಂದ ಮಣಿಸಿ ಕಪ್ ಗೆದ್ದುಕೊಂಡಿತು.

ಕೊಡಗು ವಿದ್ಯಾಲಯ ತಂಡವು ನಿಗಧಿತ 24 ಓವರ್‍ಗಳಲ್ಲಿ 7 ವಿಕೆಟ್‍ಗೆ 172 ರನ್ ಗಳಿಸಿತು. ಫೆಲೆಕ್ಸ್ ರೋಶನ್ 50, ವಿಜಯ್ 29 ರನ್ ಗಳಿಸಿದರು. ಲಯನ್ಸ್ ತಂಡವು 8 ಓವರ್‍ಗಳಿಗೆ 9 ವಿಕೆಟ್ ಕಳೆದುಕೊಂಡು ಕೇವಲ 60 ರನ್ ಗಳಿಸಿತು. ಲಯನ್ಸ್ ಪರ ಬೌಲಿಂಗ್ ಮಾಡಿದ ನದೀಶ್ 5 ಓವರ್‍ಗಳಲ್ಲಿ 4 ವಿಕೆಟ್ ಪಡೆದು 31 ರನ್ ನೀಡಿದರು. ಪೊನ್ನಣ್ಣ 5 ಓವರ್‍ಗಳಲಿ 3 ವಿಕೆಟ್ ಪಡೆದು 25 ರನ್ ನೀಡಿದರು. ಕೊಡಗು ವಿದ್ಯಾಲಯ ಪರ ತಿಮ್ಮಯ್ಯ 4 ಓವರ್‍ಗಳಲ್ಲಿ 5 ವಿಕೆಟ್ ಪಡೆದು 31 ರನ್ ನಿಡಿದರು. ಸೋಮಯ್ಯ 4 ಓವರ್‍ಗಳಲ್ಲಿ 4 ವಿಕೆಟ್ ಪಡೆದು 19 ರನ್ ನೀಡಿದರು.

ಪದವಿಪೂರ್ವ ಕಾಲೇಜು ತಂಡಗಳ ನಡುವೆ ನಡೆದ ಅಂತರ್ ಪದವಿಪೂರ್ವ ಆಲಿ ಟ್ರಾವಲ್ಸ್ ಕಪ್‍ನ್ನು ಕಾಪ್ಸ್ ತಂಡವು ವೀರಾಜಪೇಟೆ ಸೆಂಟ್ ಆನ್ಸ್ ತಂಡವನ್ನು 37 ರನ್‍ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತು.

ಮೊದಲು ಬ್ಯಾಟ್ ಮಾಡಿದ ಕಾಪ್ಸ್ ತಂಡವು 24 ಓವರ್‍ಗಳಿಗೆ 186 ರನ್ ಗಳಿಸಿ ಸರ್ವ ಪತನ ಕಂಡಿತು. ಸೆಂಟ್ ಆನ್ಸ್ ತಂಡವು 21 ಓವರ್‍ಗಳಿಗೆ 151 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಕಾಪ್ಸ್ ಪರ ಗಗನ್ 57, ತಿಮ್ಮಯ್ಯ 29, ಅಲ್ಫಿದ್ 26, ಯಶಸ್ 23 ರನ್ ಗಳಿಸಿದರು. ಸೆಂಟ್ ಆನ್ಸ್ ಪರ ಸುನಿಲ್ 42, ಆದಿತ್ಯಾ 30 ರನ್ ಗಳಿಸಿದರು. ಬೌಲಿಂಗ್‍ನಲ್ಲಿ ಸಾದಿಕ್ 5 ಓವರ್ ಬೌಲ್ ಮಾಡಿ 5 ವಿಕೆಟ್‍ಗೆ 27 ರನ್ ನೀಡಿದರು. ಚೆಂಗಪ್ಪ 5 ಓವರ್‍ಗೆ 2 ವಿಕೆಟ್ ಪಡೆದು 29 ರನ್ ಬಿಟ್ಟುಕೊಟ್ಟರು. ಕಾಪ್ಸ್ ಪರ ಬೌಲಿಂಗ್‍ನಲ್ಲಿ 4.5 ಓವರ್‍ಗೆ ನಕುಲ್ 5 ವಿಕೆಟ್ ಪಡೆದು 20 ರನ್, ಗಗನ್ 2 ಓವರ್‍ಗಳಲ್ಲಿ 3 ವಿಕೆಟ್ ಪಡೆದು 17 ರನ್, ಆಲ್ಫ್ಪಿದ್ 4 ಒವರ್‍ಗೆ 1 ವಿಕೆಟ್ 40 ರನ್, ಸಿ.ಪಿ ಗಗನ್ 4 ಓವರ್‍ಗೆ 1 ವಿಕೆಟ್ ಪಡೆದು 11 ರನ್ ನೀಡಿದರು.

ಪದವಿಪೂರ್ವ ಕಾಲೇಜು ತಂಡಗಳ ನಡುವೆ ನಡೆದ ಅಂತರ್ ಪದವಿಪೂರ್ವ ಆಲಿ ಟ್ರಾವಲ್ಸ್ ಕಪ್‍ನ್ನು ಕಾಪ್ಸ್ ತಂಡ ಗೆದ್ದುಕೊಂಡಿದೆ. ದ್ವಿತೀಯ ತಂಡವಾಗಿ ವೀರಾಜಪೇಟೆ ಸೆಂಟ್ ಆನ್ಸ್ ತಂಡ ಹೊರಹೊಮ್ಮಿದೆ. ಪಂದ್ಯ ಪುರುಷ ಪ್ರಶಸ್ತಿಯನ್ನು ಕಾಪ್ಸ್ ತಂಡದ ಗಗನ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸೆಂಟ್ ಆನ್ಸ್ ತಂಡದ ಚೆಂಗಪ್ಪ ಪಡೆದುಕೊಂಡರು.

ಕೂರ್ಗ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಮಾಚಿಮಂಡ ಕುಮಾರ್ ಅಪ್ಪಚ್ಚು, ಸದಸ್ಯ ಬಿ. ಎಂ. ಗಣೇಶ್, ಕ್ಲಬ್ ಮಹೇಂದ್ರ ವ್ಯವಸ್ಥಾಪಕ ಮಹೇಶ್, ಕಾಪ್ಸ್ ಪ್ರಾಂಶುಪಾಲ ಬೆನ್ನಿ ಕುರಿಕೋಸ್ ಬಹುಮಾನ ವಿತರಿಸಿದರು.