ಕುಶಾಲನಗರ, ಡಿ. 18: ಸಂಘಟಿತ ಕಾರ್ಯಚಟುವಟಿಕೆಗಳ ಮೂಲಕ ಸಂಘದ ಅಭಿವೃದ್ಧಿಗೆ ಸದಸ್ಯರು ಮುಂದಾಗಬೇಕಿದೆ ಎಂದು ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಪ್ಪ ಕರೆ ನೀಡಿದರು.
ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೃತ್ತ ಸರಕಾರಿ ನೌಕರರ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಸದಸ್ಯರು ಚಿಂತನೆ ಹರಿಸಬೇಕಿದೆ ಎಂದರು. ಸರಕಾರದಿಂದ ದೊರಕುವ ಸೌಲಭ್ಯ ಗಳನ್ನು ಸದ್ಬಳಕೆ ಮಾಡಿಕೊಳ್ಳುವ ದರೊಂದಿಗೆ ಅರ್ಹ ಫಲಾನುಭವಿಗಳಿಗೆ ಮಾಹಿತಿ ಒದಗಿಸುವಂತೆ ಅವರು ಕೋರಿದರು.
ಸಭೆಯಲ್ಲಿ ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಸಾಲಿನ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಬಿ.ಡಿ.ಅಣ್ಣಯ್ಯ, ಕಾರ್ಯದರ್ಶಿ ಪುಟ್ಟಸ್ವಾಮಿ, ಸಹಕಾರ್ಯದರ್ಶಿ ಹೆಚ್.ಕೆ. ಕೇಶವಯ್ಯ, ಖಜಾಂಚಿ ನಿಂಗರಾಜು ಅವರನ್ನು ಆಯ್ಕೆಗೊಳಿಸ ಲಾಯಿತು. ಹಿಂದಿನ ಸಾಲಿನ ಸಭೆ ನಡಾವಳಿ, ಲೆಕ್ಕಪತ್ರ ಮಂಡನೆ, 2018 ನೇ ಸಾಲಿನ ಮುಂಗಡ ಪತ್ರ ಮಂಡಿಸಲಾಯಿತು. ಸಂಘದ ಗೌರವ ಕಾರ್ಯದರ್ಶಿ ರಾಮಯ್ಯ, ಪ್ರಮುಖರಾದ ಸೋಮಣ್ಣ, ಮಲ್ಲಪ್ಪ, ಎ.ಎಸ್.ಜಯಪ್ಪ, ಬೇಲಯ್ಯ, ರಾಜಪ್ಪ ಇದ್ದರು. ಚಂದ್ರಶೇಖರ್ ಪ್ರಾರ್ಥಿಸಿದರು, ರಾಮಯ್ಯ ಸ್ವಾಗತಿಸಿದರು, ಸೋಮಣ್ಣ ವಂದಿಸಿದರು.