ಮಡಿಕೇರಿ, ಡಿ.19 : ನಗರಸಭೆಯ ಉಪಾಧ್ಯಕ್ಷರು ಹಾಗೂ 8ನೇ ವಾರ್ಡ್ನ ಸದಸ್ಯರೊಬ್ಬರು ನಿಯಮ ಬಾಹಿರವಾಗಿ ನಗರಸಭೆ ಮತ್ತು ಮೂಡಾದ ಅನುಮತಿ ಇಲ್ಲದೆ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ವಕ್ತಾರ ಪಪ್ಪು ತಿಮ್ಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ಭಾಗಮಂಡಲದ ನಿವಾಸಿ ಎಂ.ಆರ್. ರಾಮು ಎಂಬವರು ಮಾಹಿತಿ ಕಲೆ ಹಾಕಿದ ಸಂದರ್ಭ ಇಬ್ಬರು ಸದಸ್ಯರ ಮನೆಗಳ ನಿರ್ಮಾಣಕ್ಕೆ ಯಾವದೇ ಅನುಮತಿ ಪತ್ರ ಪಡೆಯದಿರುವ ವಿಚಾರ ಬೆಳಕಿಗೆ ಬಂದಿದೆ. ಆದ್ದರಿಂದ ನಗರಸಭೆÉ ಜಾಗದ ಸರ್ವೇ ಕಾರ್ಯ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದರು.
ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜಿನ ಅನುದಾನದಡಿ 54 ಲಕ್ಷ ರೂ. ವೆಚ್ಚದ ಕಾಮಗಾರಿ ಅಮ್ಮತ್ತಿ ಕಾರ್ಮಾಡಿನಲ್ಲಿ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಇದನ್ನು ಸಹಿಸಲಾಗದ ಶಾಸಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಮ್ಮತ್ತಿ ಕಾರ್ಮಾಡಿನಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆ ಕಾರ್ಮಾಡು ಪಂಚಾಯ್ತಿಗೆ ಬಿಡುಗಡೆಯಾಗಿರುವ 54 ಲಕ್ಷ ರೂ.ಗಳ ಪ್ಯಾಕೆÉೀಜಿನಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಪಂಚಾಯ್ತಿಗಳಲ್ಲಿ 34 ಲಕ್ಷದಷ್ಟು ಕಾಮಗಾರಿ ಮುಗಿದಿದೆ. ಈ ಕಾಮಗಾರಿಗಳನ್ನು ಶಾಸಕರು ಕೇಂದ್ರದ ಅನುದಾನದ ಕಾಮಗಾರಿಗಳೆಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ, ಇವೆಲ್ಲವು ಮುಖ್ಯಮಂತ್ರಿಗಳ ಅನುದಾನದಡಿ ನಡೆಯುತ್ತಿರುವ ಕಾಮಗಾರಿಗಳೆಂದು ಸ್ಪಷ್ಟÀಪಡಿಸಿದÀರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ನಾಮನಿರ್ದೇಶಿತ ಸದಸ್ಯ ಎಂ.ಎ.ಉಸ್ಮಾನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಸಲಹಾ ಸಮಿತಿ ಸದಸ್ಯ ರಮೇಶ್ ಹಾಗೂ ನಂದಿನೆರವಂಡ ಮಧು ಉಪಸ್ಥಿತರಿದ್ದರು.