ಪೊನ್ನಂಪೇಟೆ, ಡಿ. 19: ಕಂಡಗಾಲದ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಬೇರಳಿನಾಡು ವತಿಯಿಂದ ಹಾಕಿ ಕೂರ್ಗ್ನ ಸಹಯೋಗದಲ್ಲಿ ಕಡಂಗಾಲದ ಜಿ.ಎಂ.ಪಿ.ಎಸ್. ಮೈದಾನದಲ್ಲಿ ಜರುಗಲಿರುವ 5ನೇ ವರ್ಷದ ಚಂದೂರ ಕಮಲ ಸ್ಮಾರಕ ಆಹ್ವಾನಿತ ಜಿಲ್ಲಾ ಮಟ್ಟದ ಪುರುಷರ ಹಾಕಿ ಪಂದ್ಯಾವಳಿ ‘ಲೋಟಸ್ ಕಪ್ 2017’ಕ್ಕೆ ತಾ. 22 ರಂದು ಚಾಲನೆ ನೀಡಲಾಗುವದು ಎಂದು ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಬೇರಳಿನಾಡು ಸಂಸ್ಥೆಯ ಅಧ್ಯಕ್ಷ ಚಂದೂರ ಸಿ. ಸಂದೇಶ್ ತಿಮ್ಮಯ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠ್ಟಿಯಲ್ಲಿ ಮಾತನಾಡಿದ ಅವರು, ತಾ.22 ರಿಂದ ಆರಂಭವಾಗುವ ಪಂದ್ಯಾವಳಿ 25ರವರೆಗೆ ಒಟ್ಟು 4 ದಿನಗಳ ಕಾಲ ನಾಕೌಟ್ ಮಾದರಿಯಲ್ಲಿ ಹಾಕಿ ಪಂದ್ಯಾವಳಿ ಜರುಗಲಿದೆ. 22ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಾಯೋಜಕ ಡಾ. ಚಂದೂರ ಬಿದ್ದಪ್ಪ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಕದ್ದಣಿಯಂಡ ಹರೀಶ್ ಬೋಪಣ್ಣ, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಕೆ. ಸುರೇಶ್ ಬೋಪಣ್ಣ, ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷ ಪುಚ್ಚಿಮಂಡ ಸಾಬಾ ಬೆಳ್ಯಪ್ಪ, ಗ್ರಾ.ಪಂ. ಸದಸ್ಯ ಬಲ್ಲಡಿಚಂಡ ಜಮುನಾ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ ಲೊಕೇಶ್, ವಿ. ಬಾಡಗದ ಕಾಫಿ ಬೆಳೆಗಾರ ಕಂಜಿತಂಡ ಗಿಣಿ ಮೊಣ್ಣಪ್ಪ, ಉದ್ಯಮಿ ಪ್ರವೀಣ್ ಮತ್ತು ಕಡಂಗಾಲ ಜಿ.ಎಂ.ಪಿ. ಶಾಲೆಯ ಮುಖ್ಯ ಶಿಕ್ಷಕಿ ವೈ.ಎನ್. ಕಾವೇರಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತಾ.25ರಂದು ಮಧ್ಯಾಹ್ನದ ನಂತರ ನಡೆಯುವ ಪಂದ್ಯಾವಳಿಯ ಫೈನಲ್ಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಚಿಟ್ಯಣ್ಣ, ರುದ್ರಗುಪ್ಪೆ ವಿ.ಎಸ್.ಎಸ್.ಎನ್.ನ ಅಧ್ಯಕ್ಷ ಕೊಂಗಂಡ ವಾಸು ಮುದ್ದಯ್ಯ, ಗ್ರಾ.ಪಂ. ಸದಸ್ಯೆ ಪವಿ ಪೂವಯ್ಯ, ಉದ್ಯಮಿ ಮಾಂಗೇರ ಸಂತೋಷ್ ಉತ್ತಪ್ಪ ಮತ್ತು ಹಾಕಿ ಕೂರ್ಗ್ನ ಕಾರ್ಯದರ್ಶಿ ಪಳಂಗಂಡ ಲವ ಕುಮಾರ್ ಆಗಮಿಸಲಿದ್ದಾರೆ ಎಂದರು.
ಸಂಸ್ಥೆಯ ಕೋಶಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಡೆಸಲು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದೆ. ಪಂದ್ಯಾವಳಿಯ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಬೇರಳಿನಾಡಿನ ಅಧ್ಯಕ್ಷ ಚಂದೂರ ಸಂದೇಶ್ ತಿಮ್ಮಯ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಪಂದ್ಯಾವಳಿಯು ಸಂಪೂರ್ಣ ವಾಗಿ ದಾನಿಗಳ ನೆರವಿನಿಂದ ನಡೆಯಲಿದ್ದು, ರೂ. 4 ಲಕ್ಷ ಮೊತ್ತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಈ ಹಾಕಿ ಪಂದ್ಯಾವಳಿಯನ್ನು ಆಯೋಜಿ ಸಲಾಗಿದೆ. ಪಂದ್ಯಾವಳಿಯಲ್ಲಿ ಆಯ್ದ 12 ತಂಡಗಳು ಆಹ್ವಾನಿತ ತಂಡಗಳಾಗಿ ಭಾಗವಹಿಸಲಿದೆ. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುವದು. ಸಾರ್ವಜನಿಕರಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮೂಕಚಂಡ ಪ್ರಸನ್ನ ಮತ್ತು ಮೇಚಿಯಂಡ ಅಪ್ಪುಟ ಉಪಸ್ಥಿತರಿದ್ದರು.