ಸುಂಟಿಕೊಪ್ಪ, ಡಿ. 19: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ಕಾಲೇಜಿನ ಮುಂಭಾಗದಲ್ಲಿರುವ ಜಾಗವನ್ನು ಅಗಲೀಕರಣ ಮಾಡುವ ಸಂದರ್ಭ ಅಲ್ಲೇ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರದ ಹಿಂಭಾಗದವರೆಗೆ ಸಂಪೂರ್ಣವಾಗಿ ಮಣ್ಣು ತೆಗೆದ ಪರಿಣಾಮ ಅಂಗನವಾಡಿ ಬೀಳುವ ಹಂತದಲ್ಲಿದ್ದು, ಪುಟಾಣಿಗಳು ಮತ್ತು ಶಿಕ್ಷಕಿಯರು ಆತಂಕಕ್ಕೀಡಾಗಿದ್ದಾರೆ.

ಇಲ್ಲಿನ ಸರ್ಕಾರಿ ಪಿಯು ಕಾಲೇಜಿಗೆ 2 ಕೊಠಡಿ ಮತ್ತು ಐಷರಾಮಿ ಶೌಚಾಲಯ ನಿರ್ಮಾಣಕ್ಕಾಗಿ ನಬಾರ್ಡ್‍ನಿಂದ ರೂ. 55 ಲಕ್ಷ ಬಿಡುಗಡೆಗೊಂಡಿದ್ದು, ಇದರ ಕಾಮಗಾರಿಯನ್ನು ಜಿ.ಪಂ. ಇಂಜಿನಿಯರ್ ಫಯಾಜ್ ಕೈಗೆತ್ತಿಕೊಂಡಿದ್ದು, ಈ ಕಟ್ಟಡಗಳ ನಿರ್ಮಾಣಕ್ಕಾಗಿ ಕಾಲೇಜಿನ ಪಕ್ಕದ ಖಾಲಿ ಜಾಗವನ್ನು ಸಮತಟ್ಟು ಮಾಡುವ ನಿಟ್ಟಿನಲ್ಲಿ ಜೆಸಿಬಿ ಮೂಲಕ ಮಣ್ಣನ್ನು ಅಗೆಯಲಾಗುತಿತ್ತು.

ಕಾಲೇಜಿನ ಸಮೀಪವೇ ಸುಂಟಿಕೊಪ್ಪ ಗ್ರಾ.ಪಂ.ಗೆ ಸೇರಿದ ಸಾರ್ವಜನಿಕರಿಗೆ ಕುಡಿಯುವ ನೀರಿನ ಟ್ಯಾಂಕ್ ಮತ್ತು ಅಂಗನವಾಡಿ ಕೇಂದ್ರವೊಂದಿದ್ದು, ಅಂಗನವಾಡಿ ಕೇಂದ್ರ ಹಿಂಭಾಗದವರೆಗೂ ಅಂಗನವಾಡಿ ಬೀಳುವ ಸ್ಥಿತಿಯಲ್ಲಿದೆ.

ಕೂಡಲೇ ಸಂಬಂಧಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಇದಕ್ಕೆ ಪರಿಹಾರ ಕಂಡುಕೊಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ತಲೆ ಹೊರೆ ಕಾರ್ಮಿಕ ಕನ್ನಡ ಅಭಿಮಾನಿ ಸಂಘದ ಆದ್ಯಕ್ಷ ಎಂ.ಎಸ್. ರವಿ ಮಕ್ಕಳ ಪೋಷಕರು ಸಾರ್ವಜನಿಕರು ಆಗ್ರಹಿಸಿದ್ದಾರೆ.