ನಾಪೋಕ್ಲು, ಡಿ. 22: ಕೊಡಗು ದಂತ ವೈದ್ಯಕೀಯ ಘಟಕ 2016-17 ನೇ ಸಾಲಿನಲ್ಲಿ 7 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ದಂತ ವೈದ್ಯರ ಸಂಘದ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ನಾಪೆÇೀಕ್ಲುವಿನ ದಂತ ವೈದ್ಯ ಕೇಲೇಟಿರ ಡಾ. ಬೋಪಣ್ಣ ಉತ್ತಮ ಅಧ್ಯಕ್ಷ ಪ್ರಶಸ್ತಿ ಮತ್ತು ಘಟಕದ ಕಾರ್ಯದರ್ಶಿ ಡಾ. ಕೃಪಾಶಂಕರ್ ಉತ್ತಮ ಕಾರ್ಯದರ್ಶಿ ಪ್ರಶಸ್ತಿ ತನ್ನದಾಗಿಸಿಕೊಂಡರು.