ಸುಂಟಿಕೊಪ್ಪ, ಡಿ. 22: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆ ಸುಂಟಿಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಇಲ್ಲಿನ ಕನ್ನಡ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗುತ್ತಾ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಗುಜರಾತಿನಲ್ಲಿ ಬಿಜೆಪಿ ವಿರೋಧಿ ಅಲೆಯನ್ನು ಮೆಟ್ಟಿ ತನ್ನ ನೆಲೆಯನ್ನು ಗುಜರಾತಿನಲ್ಲಿ ಕಂಡುಕೊಂಡಿದೆ. ಇದೊಂದು ಅವಿಸ್ಮರಣೀಯವಾದ ಗೆಲುವು ಎಂದರು. ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿದರು. ಈ ಸಂದರ್ಭ ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ರಂಜಿತ್ ಪೂಜಾರಿ, ಬಿಜೆಪಿ ಮುಖಂಡರಾದ ಬಿ.ಕೆ. ವಿಶ್ವನಾಥ್ ರೈ, ಸಹದೇವನ್, ಮಾಜಿ ನಗರ ಅಧ್ಯಕ್ಷ ಬಿ.ಕೆ. ಮೋಹನ್, ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಗ್ರಾ.ಪಂ. ಸದಸ್ಯರಾದ ಬಿ.ಎಂ. ಸುರೇಶ್, ಸಿ. ಚಂದ್ರ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಬಿ.ಐ. ಭವಾನಿ, ಮಾಜಿ ಯುವ ಮೋರ್ಚಾದ ಧನು ಕಾವೇರಪ್ಪ, ಬಿ.ಜೆ.ಪಿ. ಕಾರ್ಯಕರ್ತರಾದ ನಾಗೇಶ್ ಪೂಜಾರಿ, ಪಿ.ಸಿ. ಮೋಹನ್, ಅಣ್ಣು ಶೇಖರ್, ಅಶೋಕ್ ವಿನೋದ್, ಪ್ರಕಾಶ್, ರಾಕೇಶ್, ದಿನು ಸಂತೋಷ್ ತೇಜಸ್, ರವಿ ಪನ್ಯ ಮತ್ತು ಇತರ ಬಿ.ಜೆ.ಪಿ ಕಾರ್ಯಕರ್ತರು ಇದ್ದರು.