ಸುಂಟಿಕೊಪ್ಪ, ಡಿ. 22: ಇಲ್ಲಿನ ‘ನಮ್ಮ ಸುಂಟಿಕೊಪ್ಪ ಬಳಗ’ದ ವಾರ್ಷಿಕೋತ್ಸವದ ಅಂಗವಾಗಿ “ನಮ್ಮೂರಿನ ನಮ್ಮೂರಿಗಾಗಿ’ ಎಂಬ ಶಿರೋನಾಮೆಯಡಿಯಲ್ಲಿ ಸುಂಟಿಕೊಪ್ಪದ ಜಿಯಂಪಿ ಶಾಲಾ ಮೈದಾನದಲ್ಲಿ ತಾ. 31, ಜ. 6 ಮತ್ತು 7 ರಂದು ‘ಕ್ರೀಡಾ ಹಬ್ಬ’ ನಡೆಯಲಿದೆ.ಇಲ್ಲಿನ ಮಹಿಳೆಯರಿಗಾಗಿಯೇ ಸೀಮಿತವಾಗಿ ಸ್ತ್ರೀ ಶಕ್ತಿ ಒಕ್ಕೂಟದ ಸಹಕಾರದೊಂದಿಗೆ ಮಹಿಳಾ ದಿನ ಮತ್ತು ಇಲ್ಲಿನ ಮಕ್ಕಳಿಗಾಗಿ ಮಕ್ಕಳ ಸಂತೆಯನ್ನು ತಾ. 31 ರಂದು ಆಯೋಜಿಸಲಾಗಿದೆ.

ತಾ. 31 ರ ಮಧ್ಯಾಹ್ನ 2 ಗಂಟೆಯಿಂದ ಮಹಿಳೆಯರಿಗಾಗಿ ಮಡಿಕೆ ಒಡೆಯುವದು, ಕುಂಟೆ ಬಿಲ್ಲೆ, ಕೆರೆ-ದಡ, ನಿಂಬೆ-ಚಮಚ, ಲಗೋರಿ, ಬೆಂಕಿ ರಹಿತ ಅಡುಗೆ, ನೀರು ತುಂಬುವ ಸ್ಪರ್ಧೆ, ಬಕೆಟಿಗೆ ಚೆಂಡು ಹಾಕುವದು, ಬಲೂನ್ ಒಡೆಯುವದು, ನಿಧಾನ ಸೈಕಲ್ ರೇಸ್, ಬಿಸ್ಕೇಟ್ ತಿನ್ನುವ ಸ್ಪರ್ಧೆ, ಚೆಂಡು ಬಣ್ಣ ಬೇರ್ಪಡಿಸುವ ಸ್ಪರ್ಧೆ ಮತ್ತು ಮಕ್ಕಳಿಗಾಗಿ ಮಕ್ಕಳ ಸಂತೆ ಮತ್ತು ಕಾಳುಹೆಕ್ಕುವದು, ಕಪ್ಪೆ ಜಿಗಿತ, ಜಿಗಿ-ಅಗಿ ಸ್ಪರ್ಧೆ ನಡೆಯಲಿದೆ.

ಸುಂಟಿಕೊಪ್ಪದ ಫುಟ್ಬಾಲ್ ಅನ್ನು ಉಳಿಸುವ ನಿಟ್ಟಿನಲ್ಲಿ ಸೇವ್ ಫುಟ್ಬಾಲ್ ಸ್ಪಿರಿಟ್ ಆಫ್ ಸುಂಟಿಕೊಪ್ಪ ಅಭಿಯಾನವನ್ನು ಆರಂಭಿಸಲಾಗುವದು. ಆ ನಿಟ್ಟಿನಲ್ಲಿ ಜ. 6 ರಂದು ಮಧ್ಯಾಹ್ನ 2 ರಿಂದ ಸುಂಟಿಕೊಪ್ಪದ 8 ತಂಡಗಳ ನಡುವೆ 5 ಜನರ ಫುಟ್ಬಾಲ್ ಟೂರ್ನಿ ಹಾಗೂ ಜ. 7 ರಂದು ಮಧ್ಯಾಹ್ನ 2.30 ರಿಂದ ಪುರುಷರಿಗಾಗಿ ತೆಂಗೇರ ಪೋರಾಟ, ಬುಗುರಿ, ಗುರಿ ನೋಡುವ ಸ್ಪರ್ಧೆ, ಮೂರು ಕಾಲಿನ ಓಟ ಮತ್ತು ನಿಧಾನ ಬೈಕ್ ರೇಸ್ ನಡೆಯಲಿದೆ.

ಜ. 14 ರಂದು ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಮ್ಮ ಸುಂಟಿಕೊಪ್ಪ ಬಳಗದ ವಾರ್ಷಿಕೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.